ಬಿನ್ನಿಪೇಟೆ ಕಾರ್ಪೊರೇಟರ್ ಮಹದೇವಮ್ಮ ನಾಗರಾಜ್ ನಿಧನ

ಬಿನ್ನಿಪೇಟೆಯ ಬಿಬಿಎಂಪಿ ಸದಸ್ಯೆ ಮಹದೇವಮ್ಮ ನಾಗರಾಜ್ ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ತಿರುಪತಿಯಲ್ಲಿ ನಿಧನರಾಗಿದ್ದಾರೆ.
ಬಿನ್ನಿಪೇಟೆ ವಾರ್ಡ್ ನಂ 121 ರ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಸದಸ್ಯೆಯಾಗಿದ್ದ ಮಹದೇವಮ್ಮ ಅವರು ತಿಮ್ಮಪ್ಪನ ದರ್ಶನಕ್ಕೆಂದು ಕುಟುಂಬ ಸಮೇತರಾಗಿ ತಿರುಪತಿಗೆ ತೆರಳಿದ್ದರು. ದರ್ಶನ ಮುಗಿಸಿ ಹಿಂದಿರುಗುವಾಗ ಮಾರ್ಗ ಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿದೆ.ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ದಲ್ಲಿ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಮಹದೇವಮ್ಮ ಅವರು ಆಯ್ಕೆಯಾಗಿದ್ದರು. ಬಿಬಿಎಂಪಿ ಮೇಯರ್, ಆಯುಕ್ತರು, ಪಾಲಿಕೆ ಸದಸ್ಯರು ಮಹದೇವಪ್ಪ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Comments