ಜೆಡಿಎಸ್ ಶಾಸಕನಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ಪ್ರಾಣ ಬೆದರಿಕೆ

ಜಿಲ್ಲೆ ಚಿಕ್ಕನಾಯಕನಹಳ್ಳಿಯ ಜೆಡಿಎಸ್ ಶಾಸಕ ಸಿಬಿ ಸುರೇಶ್ ಬಾಬು ಎಂಬುವವರಿಗೆ ದೂರವಾಣಿ ಕರೆ ಮಾಡಿರುವ ಭೂಗತ ಪಾತಕಿ ರವಿ ಪೂಜಾರಿ ಹತ್ತು ಕೋಟಿ ರೂಗೆ ಡಿಮ್ಯಾಂಡ್ ಇಟ್ಟು ಹಣ ಕೊಡದಿದ್ದರೆ ಪ್ರಾಣಕ್ಕೆ ಅಪಾಯ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಚಿಕ್ಕನಾಯಕನಹಳ್ಳಿ ಶಾಸಕ ಸಿಬಿ ಸುರೇಶ್ ಬಾಬು ಬೆಂಗಳೂರಿನ ಬಸವೇಶ್ವರ ನಗರದ ನಿವಾಸದಲ್ಲಿದ್ದಾಗ ಈ ಬೆದರಿಕೆ ಕರೆ ಬಂದಿದ್ದು.ಕರೆ ಮಾಡಿದ ಬಳಿಕ ಶಾಸಕ ಸಿಬಿ ಸುರೇಶ್ ಬಾಬು ಅವರ ಮೊಬೈಲ್ ಗೆ ಭೂಗತ ಪಾತಕಿ ರವಿ ಪೂಜಾರಿಯಿಂದಮೆಸೇಜ್ ಕೂಡ ರವಾನೆಯಾಗಿದೆ.ಪೊಲೀಸ್ ಠಾಣೆಗೆ ದೂರು ನೀಡಿದರೆ ನಿನ್ನ ಕುಟುಂಬಕ್ಕೂ ಹಾನಿ ಮಾಡುವುದಾಗಿ ಭೂಗತ ಪಾತಕಿ ರವಿ ಪೂಜಾರಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ . ಶಾಸಕ ಸಿಬಿ ಸುರೇಶ್ ಬಾಬು ಈ ಸಂಬಂಧ ಬಸವೇಶ್ವರ ನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದು .ದೂರು ಸ್ವೀಕರಿಸಿರುವ ಪೊಲೀಸರು ಎಲ್ಲಾ ಕಡೆಯಿಂದಲೂ ತನಿಖೆ ಚುರುಕುಗೊಳಿಸಿದ್ದಾರೆ.
Comments