ಪ್ರೀತಿಸಿ ಮದುವೆಯಾಗಿದ್ದ ಸಹ ನಟನಿಂದಲೇ ನಟಿಗೆ ವಂಚನೆ

06 Jan 2018 10:26 AM | Crime
412 Report

ನಮಿತ್​ ಐ ಲವ್ ಯು ಚಿತ್ರೀಕರಣದ ವೇಳೆ ಸಹ ನಟ ಅಮಿತ್​ ಹಾಗೂ ಸಹ ನಟಿಯ ನಡುವೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ವಿವಾಹವಾಗಿದ್ದರು. ಅಮಿತ್ ಕುಟುಂಬಸ್ಥರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ನನ್ನನ್ನು ದೂರ ಮಾಡಿದ್ದಾನೆ ಎಂದು ಆರೋಪಿಸಿ ನಟಿ, ಅಮಿತ್​​ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿ ಮದುವೆಯಾಗಿದ್ದ ಸಹ ನಟನಿಂದ ವಂಚನೆಯಾಗಿದೆ ಎಂದು ನಟಿಯೊಬ್ಬರು ಆರೋಪಿಸಿದ್ದಾರೆ. ನಟ ಅಮಿತ್ ಕೂಡ ಪದೇ ಪದೇ ನನಗೆ ಕಿರುಕುಳ ನೀಡುತ್ತಿದ್ದಾರೆಂದು ನಟಿಯ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ. ಎರಡೂ ದೂರನ್ನು ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Edited By

Shruthi G

Reported By

Madhu shree

Comments