ಶವಯಾತ್ರೆಗೆ ಅವಕಾಶ ನೀಡದೆ ಗೌಪ್ಯವಾಗಿ ದೀಪಕ್ ನ ಮೃತದೇಹ ಕರೆದೊಯ್ದ ಪೊಲೀಸರು

ನಿನ್ನೆ ಸುರತ್ಕಲ್ ಸಮೀಪದ ಕಾಟಿಪಳ್ಳ ಕೈಕಂಬದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ (24) ಎಂಬುವರನ್ನು ಕಾರಿನಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದು, ಇದೀಗ ಮೃತದೇಹವನ್ನು ಪೊಲೀಸರು ಗೌಪ್ಯವಾಗಿ ಆಂಬ್ಯುಲೆನ್ಸ್ ಮೂಲಕ ಮನೆಗೆ ತಂದಿದ್ದಾರೆ.
ಆದರೆ ಮನೆಯವರು ಆಂಬ್ಯುಲೆನ್ಸ್ ನಿಂದ ಮೃತದೇಹವನ್ನು ತೆಗೆಯಲು ಒಪ್ಪದೆ ಕಾಂಗ್ರೆಸ್ ಹಾಗೂ ಪೊಲೀಸರ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಆಸ್ಪತ್ರೆಯಿಂದ ಯಾವುದೇ ಮಾಹಿತಿ ಇಲ್ಲದೆ ಮೃತದೇಹವನ್ನು ತಂದಿದ್ದಾರೆ. ಕುಟುಂಬಸ್ಥರು ಎಜೆಯಿಂದ ದೀಪಕ್ ನ ಮೃತದೇಹವನ್ನು ಶವಯಾತ್ರೆ ಮಾಡಬೇಕೆಂದು ತಿಳಿದುಕೊಂಡಿದ್ದರು. ಆದರೆ ಪೊಲೀಸರು ಯಾವುದೇ ಮಾಹಿತಿ ಇಲ್ಲದೆ ಮೃತದೇಹವನ್ನು ಮನೆಗೆ ತಂದಿದ್ದಾರೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕುಟುಂಬದವರು ಹಾಗೂ ಗ್ರಾಮಸ್ಥರು ಶವವನ್ನು ವಾಪಸ್ ಎಜೆಗೆ ತೆಗೆದುಕೊಂಡು ಹೋಗಿ ಎಂದು ಒತ್ತಾಯಿಸುತ್ತಿದ್ದಾರೆ. ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
Comments