ಬ್ಲೂವೇಲ್ ಗೇಮ್ ಗೆ ಮತ್ತೊಂದು ವಿದ್ಯಾರ್ಥಿ ಬಲಿ

ತೆಲಂಗಾಣದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಮುಖಕ್ಕೆ ಪ್ಲಾಸ್ಟಿಕ್ ಬಿಗಿದುಕೊಂಡು ಉಸಿರುಗಟ್ಟಿಸಿಕೊಂಡು ಸಾವಿಗೆ ಶರಣಾಗಿದ್ದು, ಬ್ಲೂವೇಲ್ ಗೇಮ್ ಕಾರಣಕ್ಕಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮಾಪ್ಲೆ ಟೌನ್ ನ ಗಾಂಧಿಪೇಟ್ ನಿವಾಸಿ ವಿಜಯ ಭಾಸ್ಕರ್ ಎಂಬವರ ಪುತ್ರ 19 ವರ್ಷದ ವರುಣ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದು, ಈತ ಬಿರ್ಲಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದನೆಂದು ಹೇಳಲಾಗಿದೆ. ಘಟನೆ ನಡೆದ ದಿನದಂದು ರಾತ್ರಿ 10 ಗಂಟೆವರೆಗೂ ವರುಣ್ ಪೋಷಕರ ಜೊತೆಗಿದ್ದು, ಬಳಿಕ ಅವರುಗಳು ಮಲಗಲು ಮೊದಲಂತಸ್ತಿಗೆ ತೆರಳಿದ್ದಾರೆ. ಕೆಳ ಅಂತಸ್ತಿನಲ್ಲಿ ಮಲಗಿದ್ದ ವರುಣ್ ಪ್ಲಾಸ್ಟಿಕ್ ಕವರನ್ನು ತನ್ನ ತಲೆಗೆ ಬಿಗಿದುಕೊಂಡಿದ್ದು, ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
Comments