Report Abuse
Are you sure you want to report this news ? Please tell us why ?
ದಲಿತ ಬಾಲಕಿಯ ಅತ್ಯಾಚಾರ ಕೊಲೆ ಖಂಡಿಸಿ ಕಲಬುರ್ಗಿ ಬಂದ್

28 Dec 2017 12:45 PM | Crime
345
Report
ವಿಜಯಪುರದಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಗುರುವಾರ ಕಲಬುರ್ಗಿ ಬಂದ್ಗೆ ಕರೆ ನೀಡಿದ್ದು, ಇಂದು ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಅದಲ್ಲದೆ ಪ್ರತಿಭಟನಾಕಾರರು ನಗರದ ಕೇಂದ್ರ ಬಸ್ ನಿಲ್ದಾಣ, ರಾಮಮಂದಿರ, ಜಗತ್ ವೃತ್ತದಲ್ಲಿ ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಆಟೊ ಸಂಚಾರವೂ ಇಲ್ಲ ಹಾಗೂ ಅಂಗಡಿಗಳ ಮುಂಗಟ್ಟುಗಳು ಮುಚ್ಚಿವೆ. ಕೆಲ ಯುವಕರು ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದಿಂದ ಸೂಪರ್ ಮಾರ್ಕೆಟ್ವರೆಗೆ ಬೈಕ್ ರ್ಯಾಲಿ ನಡೆಸಿದರು.

Edited By
Shruthi G

Comments