ಬೆಚ್ಚಿ ಬೀಳಿಸುತ್ತೆ ಭೂಗತ ಪಾತಕಿಯ ಹೊಸ ಸ್ಕೆಚ್..!
ತಿಹಾರ್ ಜೈಲಿನಲ್ಲೇ ಡಾನ್ ಚೋಟಾ ರಾಜನ್ ಮುಗಿಸಲು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಯೋಜನೆ ರೂಪಿಸಿದ್ದ ಸಂಗತಿ ಬಹಿರಂಗವಾಗಿದೆ. ಗುಪ್ತಚರ ಸಂಸ್ಥೆಗಳು ಈ ಕುರಿತು ಮಾಹಿತಿ ನೀಡಿದ್ದು, ತಿಹಾರ್ ಜೈಲಿನಲ್ಲಿರುವ ಚೋಟಾ ರಾಜನ್ ನನ್ನು ದಾವೂದ್ ಕೊಲ್ಲಲು ಪ್ಲಾನ್ ಮಾಡಿರುವ ಬಗ್ಗೆ ಎಚ್ಚರಿಕೆ ನೀಡಿವೆ. ಹೈ ಪ್ರೊಫೈಲ್ ಜೈಲಿನಲ್ಲಿರುವ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಜೈಲಿನ ಅಧಿಕಾರಿಗಳಿಗೆ ಗುಪ್ತಚರ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೆಹಲಿಯಲ್ಲಿ ಕುಖ್ಯಾತ ದರೋಡೆಕೋರ ನೀರಜ್ ಭಾವಾ ವಿಚಾರಣೆಯ ಸಂದರ್ಭದಲ್ಲಿ ಈ ಆಘಾತಕಾರಿ ಮಾಹಿತಿ ಗೊತ್ತಾಗಿದೆ. ಮದ್ಯದ ಅಮಲಿನಲ್ಲಿ ಸಹಾಯಕನಿಗೆ ಫೋನ್ ಮಾಡುವಾಗ ನೀರಜ್ ಈ ವಿಷಯ ಮಾತನಾಡಿದ ಬಗ್ಗೆ ಮಾಹಿತಿ ಕಲೆ ಹಾಕಿದ ಗುಪ್ತಚರ ಸಂಸ್ಥೆ ಅಧಿಕಾರಿಗಳು, ನೀರಜ್ ಭಾವಾ ಮೂಲಕ ಚೋಟಾ ಶಕೀಲ್ ಹತ್ಯೆಗೆ ದಾವೂದ್ ಸಂಚು ರೂಪಿಸಿರುವುದನ್ನು ತಿಳಿದುಕೊಂಡಿದ್ದಾರೆ. ಜೈಲಿನಲ್ಲಿ ಎಲ್ಲಾ ರೀತಿಯ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಚೋಟಾ ರಾಜನ್ ಮತ್ತು ಅನುಮಾನಾಸ್ಪದ ಸಹಕೈದಿಗಳ ಬಗ್ಗೆ ನಿಗಾ ವಹಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
Comments