ಪ್ರೀತಿಸಲು ನಿರಾಕರಿಸಿದ ಯುವತಿಗೆ ನಡುರಸ್ತೆಯಲ್ಲೇ ಬೆಂಕಿ ಹಚ್ಚಿದ ಯುವಕ

22 Dec 2017 12:37 PM | Crime
435 Report

ಪ್ರೀತಿ ನಿರಾಕರಿಸಿದ ಸಿಟ್ಟಿನಿಂದ ಭಗ್ನ ಪ್ರೇಮಿಯೊಬ್ಬ ಯುವತಿ ಮೇಲೆ ನಡು ರಸ್ತೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಸಂಧ್ಯಾ ರಾಣಿ (22) ಎಂಬವರೇ ಭಗ್ನ ಪ್ರೇಮಿಯ ರಾಕ್ಷಸಿ ಕೃತ್ಯದಿಂದ ಸಜೀವ ದಹನಗೊಂಡ ನತದೃಷ್ಟ ಯುವತಿ. ಕಾರ್ತಿಕ್ ಆಕೆಯನ್ನು ಕೊಂದ ಭಗ್ನ ಪ್ರೇಮಿ.

ಗಂಭೀರವಾಗಿ ಗಾಯಗೊಂಡಿರುವ 25 ವರ್ಷದ ಯುವತಿ ಸಂಧ್ಯಾರಾಣಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಕಣ್ಣೆದುರಲ್ಲೇ ನಡೆದ ಈ ಘಟನೆಯಿಂದಾಗಿ ಜನ ಬೆಚ್ಚಿಬಿದ್ದಿದ್ದಾರೆ. ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂಧ್ಯಾರಾಣಿಯನ್ನು ಯುವಕ ಏಕಪಕ್ಷೀಯವಾಗಿ ಪ್ರೀತಿಸಿದ್ದು, ಆತನಿಗೆ ಸಂಧ್ಯಾ ಸ್ಪಂದಿಸಿರಲಿಲ್ಲ. ಹೈದರಾಬಾದ್ ನ ಲಾಲ್ ಗುಡಾ ಏರಿಯಾದಲ್ಲಿ ಗುರುವಾರ ಸಂಜೆ ಆಕೆಯನ್ನು ಅಡ್ಡಗಟ್ಟಿದ ಯುವಕ ಈ ಕೃತ್ಯವೆಸಗಿದ್ದಾನೆ. ಸೀಮೆಎಣ್ಣೆ ಸುರಿದು ಯುವತಿಗೆ ಬೆಂಕಿ ಹಚ್ಚಿದ್ದು, ಆಕೆಯ ಕಿರುಚಾಟ ಕೇಳಿದ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು, ತೀವ್ರ ಸುಟ್ಟ ಗಾಯಗಳಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾಗಿರುವ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಸಂಧ್ಯಾರಾಣಿಗೆ ಪರಿಚಿತನೇ ಆಗಿದ್ದ ಕಾರ್ತಿಕ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Edited By

Suresh M

Reported By

Madhu shree

Comments