ತುಮಕೂರು, ಬೆಳಗಾವಿ, ಧಾರವಾಡ, ಶಿವಮೊಗ್ಗದಲ್ಲಿ ಎಸಿಬಿ ದಾಳಿ

ಅಕ್ರಮ ಆಸ್ತಿ ಹೊಂದಿರುವ ದೂರಿಗೆ ಸಂಬಂಧಿಸಿದಂತೆ ತುಮಕೂರಿನ ಕೊರಟಗೆರೆಯಲ್ಲಿರುವ ಪಿಡಬ್ಲ್ಯು ಡಿ(Public Works Department) ಎಂಜಿನಿಯರ್ ಜಗದೀಶ್ ನಿವಾಸದ ಮೇಲೆ ಇಂದು(ಡಿ.13) ಬೆಳಿಗ್ಗೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಕೇವಲ ತುಮಕೂರು ಮಾತ್ರವಲ್ಲದೆ, ಧಾರವಾಡ, ಬೆಳಗಾವಿ ಮತ್ತು ಶಿವಮೊಗ್ಗದ ವಿವಿಧ ಇಂಜಿನಿಯರ್ ಗಳ ಮನೆಯ ಮೇಲೂ ಏಕಕಾಲದಲ್ಲಿ ಎಸಿಬಿ ದಾಳಿ ನಡೆಸಲಾಗಿದೆ.ಬೆಳಗಾವಿಯ ಸುರೇಶ್ ಭೀಮಾ ನಾಯ್ಕ್ ಎಇಇ(Associate energy engineer) ಅವರ ನಿವಾಸ ಮತ್ತು ಅವರಿಗೆ ಸಂಬಂಧಿಸಿದ ವಿವಿಧ ಕಚೇರಿಯ ಮೇಲೂ ದಾಳಿ ನಡೆದಿದೆ. ಅಲ್ಲದೆ, ಶಿವಮೊಗ್ಗ ಜಿಲ್ಲೆಯ ಸಾಗರದ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಮಲ್ಲಪ್ಪ ಅವರ ಮನೆಯ ಮೇಲೂ ದಾಳಿ ನಡೆದಿದೆ.ಧಾರವಾಡದಲ್ಲಿ ನಿವಾಸ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಭಾಗದ ಎಸಿಎಫ್ ಪಾಂಡುರಂಗ ಪೈ ಅವರ ನಿವಾಸ ಹಾಗೂ ಕಚೇರಿಯ ಮೇಲೂ ಎಸಿಬಿ ದಾಳಿ ನಡೆದ ಕುರಿತು ಮಾಹಿತಿ ಲಭ್ಯವಾಗಿದೆ. ಏಕಕಾಲದಲ್ಲಿ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
Comments