ಜೆಡಿಎಸ್‌ ಮುಖಂಡ ಗೋವಿಂದೇಗೌಡನ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಗಳು

12 Dec 2017 5:32 PM | Crime
312 Report

ಜೆಡಿಎಸ್ ಮುಖಂಡ ಹಾಗೂ ಮಾಜಿ ಕಾರ್ಪೋರೇಟರ್ ಗೋವಿಂದೇಗೌಡ (59) ಅವರನ್ನು ದುಷ್ಕರ್ಮಿಗಳು ಕಳೆದ ಶನಿವಾರ ಸಂಜೆ ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲೇ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜಗೋಪಾಲ ನಗರ ಪೋಲಿಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಭಿ, ಸಂದೀಪ್, ರಾಜಶೇಖರ್, ವೇಲು ಬಂಧಿತ ಆರೋಪಿಗಳಾಗಿದ್ದು, ಹಣದ ಆಸೆಗಾಗಿ ಹತ್ಯೆ ಮಾಡಿದ್ದ ಆರೋಪಿಗಳು ಗೋವಿಂದೇಗೌಡ ಅವರನ್ನು ಕೊಲೆ ಮಾಡಿದ್ದಾರೆ ಅಂತ ಪೋಲಿಸರ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ ಅಂತ ತಿಳಿದು ಬಂದಿದೆ ಎನ್ನಲಾಗಿದೆ.

Edited By

Shruthi G

Reported By

Shruthi G

Comments