ಅಪ್ರಾಪ್ತ ಪ್ರೇಮಿಗಳಿಬ್ಬರು ನೇಣಿಗೆ ಶರಣು

ಗೌರಿ ಬಿದನೂರು ತಾಲೂಕಿನ ಪೆದ್ದನಹಳ್ಳಿ ಎಂಬಲ್ಲಿ ಹದಿಹರೆಯದ ಪ್ರೇಮಿಗಳಿಬ್ಬರು ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಗಾನವಿ (16)ಮತ್ತು ಗಿರೀಶ್(18) ಜೊತೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಡೆತ್ ನೋಟ್ ನಲ್ಲಿ ಕೊನೆ ಆಸೆ ಬರೆದಿಟ್ಟಿದ್ದಾರೆ.
ಅಪ್ರಾಪ್ತ ವಯಸ್ಕರಾದ ಕಾರಣ ಸದ್ಯ ಪ್ರೀತಿ ಪ್ರೇಮ ಎಲ್ಲಾ ಬೇಡ. ಓದಿ ಮುಂದೆ ಬನ್ನಿ ಆಮೇಲೆ ನಾವೇ ನಿಮಗೆ ಮದುವೆ ಮಾಡುತ್ತೇವೆ ಅಂತ ಬುದ್ದಿವಾದ ಹೇಳಿದ್ದೀವಿ. ಆದ್ರೆ ಅಷ್ಟರಲ್ಲೇ ಅತ್ಮಹತ್ಯೆ ಮಾಡಿಕೊಂಡಿದ್ದಾರೆ, ಅಂತ ಮೃತರ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇವರಿಬ್ಬರು ತಮ್ಮ ಕೊನೆಯ ಆಸೆಯನ್ನು ಬರೆದಿಟ್ಟಿದ್ದು, ಇಬ್ಬರನ್ನು ಮರಣೋತ್ತರ ಪರೀಕ್ಷೆ ಮಾಡದೇ ಮಣ್ಣು ಹಾಕಿ ಒಂದೇ ಸಮಾಧಿ ಮಾಡಿ ಎಂದು ಹೇಳಿದ್ದಾರೆ. ಇಂದು ಬೆಳಿಗ್ಗೆ ಮನೆಯಿಂದ ಶಾಲಾ-ಕಾಲೇಜಿಗೆ ಅಂತ ಹೋದ ಇವರಿಬ್ಬರು ಗ್ರಾಮದ ಹೊರವಲಯದಲ್ಲಿರುವ ಹುಣಸೆ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ತಿಳಿದು ಬಂದಿದೆ. ಹುಣಸೆ ಮರದ ಕೆಳಗೆ ಡೆತ್ ನೋಟ್ ಪತ್ತೆಯಾಗಿದ್ದು, ಡೆತ್ ನೋಟ್ ನಲ್ಲಿ ತಮ್ಮ ಕೊನೆಯ ಆಸೆಯನ್ನು ಹೇಳಿಕೊಂಡಿದ್ದಾರೆ. ಪತ್ರದಲ್ಲಿ ನಮ್ಮಿಬ್ಬರನ್ನು ಒಂದೇ ಗುಣಿಗೆ ಹಾಕಿ, ಪೋಸ್ಟ್ ಮಾರ್ಟಂ ಗೆ ಕೊಡಬೇಡಿ, I Am Sorry ಅಂತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಮರದ ಕೆಳಗಡೆ ಬಾಲಕಿಯ ಸ್ಕೂಲ್ ಬ್ಯಾಗ್ ಮತ್ತು ಪುಸ್ತಕಗಳು ಲಭ್ಯವಾಗಿವೆ.ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments