ರವಿ ಬೆಳಗೆರೆಯಿಂದ ಸಿಗರೇಟ್ ಗೆ ಕಿರಿಕ್

ಪತ್ರಕರ್ತನ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ, ಪತ್ರಕರ್ತ ರವಿ ಬೆಳಗೆರೆ ಜೈಲಿನಲ್ಲಿ ಮೊದಲ ರಾತ್ರಿ ಕಳೆದಿದ್ದು, ಬೆಳಿಗ್ಗೆ ಚಿತ್ರಾನ್ನ ಸೇವಿಸಿದ್ದಾರೆ. ಅವರ ಪುತ್ರಿ ಚೇತನಾ ಮನೆಯಿಂದ ತಿಂಡಿ ತಂದಿದ್ದು, ಸರದಿ ಸಾಲಿನಲ್ಲಿ ನಿಂತು ಪಾಸ್ ಪಡೆದು ಒಳಗೆ ಹೋಗಿದ್ದಾರೆ. ಇನ್ನು ರವಿ ಬೆಳಗೆರೆ ಮೊದಲಿಗೆ ಚಿತ್ರಾನ್ನ ತಿನ್ನಲು ಹಿಂದೇಟು ಹಾಕಿದರೂ, ಬಳಿಕ ಅದನ್ನು ಸೇವಿಸಿದ್ದಾರೆ.
ಜೈಲಿನಲ್ಲಿ ಸಿಗರೇಟ್ ತಂದು ಕೊಡುವಂತೆ ಅವರು ಜೈಲಿನ ಸಿಬ್ಬಂದಿಗೆ ಕೇಳಿದ್ದು, ಇದಕ್ಕೆ ಸಿಬ್ಬಂದಿ ನಿರಾಕರಿಸಿದ್ದಾರೆ. ಜೈಲಿನ ನಿಯಮಗಳ ಪ್ರಕಾರ, ಒಳಗೆ ಸಿಗರೇಟ್ ಸೇದುವಂತಿಲ್ಲ ಎಂದು ತಿಳಿಸಿದ್ದಾರೆ. ಆದರೆ, ರವಿ ಬೆಳಗೆರೆ ಪಟ್ಟು ಬಿಡದ ಕಾರಣ ಅವರಿಗೆ ಸಿಗರೇಟ್ ಕೊಡಲಾಗಿದೆ ಎನ್ನಲಾಗಿದೆ. ಪತ್ರಕರ್ತ ಸುನಿಲ್ ಹೆಗ್ಗರವಳ್ಳಿ ಹತ್ಯೆಗೆ ರವಿ ಬೆಳಗೆರೆ ಸುಪಾರಿ ನೀಡಿದ್ದಾಗಿ ಬಂಧಿತ ಶಶಿಧರ ಮುಂಡೆವಾಡಿ ಮಾಹಿತಿ ನೀಡಿದ್ದು, ಸಿ.ಸಿ.ಬಿ. ಪೊಲೀಸರು ರವಿ ಬೆಳಗೆರೆ ಅವರನ್ನು ಬಂಧಿಸಿದ್ದರು. ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
Comments