ಲವ್ ಜಿಹಾದ್ ಸೇಡು : ಯುವಕನ ಸಜೀವ ದಹನದ ವಿಡಿಯೋ ವೈರಲ್

ರಾಜಸ್ಥಾನದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಥಳಿಸಿ ಲವ್ ಜಿಹಾದ್ ಬಗ್ಗೆ ಬೆದರಿಕೆ ಹಾಕುತ್ತಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ಮೃತದೇಹವನ್ನು ಸುಡಲಾಗುತ್ತಿರುವುದು ನೈಜ ದೃಶ್ಯ ಎಂದು ಪೊಲೀಸರು ಹೇಳಿದ್ದು, ಆರೋಪಿಯನ್ನು ಶಂಭು ಲಾಲ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಎಸ್‌ಐ ಟಿ ಪೊಲೀಸರು ಬಂಧಿಸಿದ್ದಾರೆ.
ಕೊಡಲಿಯಿಂದ ಕಾರ್ಮಿಕನನ್ನು ವ್ಯಕ್ತಿಯೊಬ್ಬ ಹತ್ಯೆ ಮಾಡುತ್ತಿರುವ ದೃಶ್ಯ ಸೆರೆಯಾಗಿದ್ದು, 'ಲವ್ ಜಿಹಾದ್ ಕೊನೆಯಾಗದಿದ್ದಲ್ಲಿ ಪ್ರತಿಯೊಬ್ಬ ಭಾರತೀಯನೂ ಹೀಗೆಯೇ ಮಾಡುತ್ತಾನೆ' ಎಂಬ ಎಚ್ಚರಿಕೆ ನೀಡಿದ್ದಾರೆ. ಉದ್ದೇಶ ಪೂರ್ವಕವಾಗಿ ಈ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು. ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
Comments