ಯುವತಿಯರಿಗೆ ಪೋಲಿ ಸಂದೇಶ ಕಳುಹಿಸಿ ಕಿರುಕುಳ ನೀಡ್ತಿದ್ದ ಪೊಲೀಸಪ್ಪ

ಪೊಲೀಸ್ ಠಾಣೆಗೆ ಬರುತ್ತಿದ್ದ ಯುವತಿಯರು ಮತ್ತು ಮಹಿಳೆಯರಿಂದ ಪ್ರಕಾಶ್ ವಾಟ್ಸ್ಆ್ಯಪ್ ನಂಬರ್ ಪಡೆದುಕೊಳ್ಳುತ್ತಿದ್ದರು. ಆ ನಂತರ ವಾಟ್ಸ್ಆ್ಯಪ್ ನಂಬರ್ಗೆ ಸಂದೇಶಗಳನ್ನು ಕಳುಹಿಸಿ ಫ್ರೆಂಡ್ಶಿಪ್ ಮಾಡುವಂತೆ ಹೇಳುತ್ತಿದ್ದರು. ವಿರೋಧಿಸಿದ ಯುವತಿಯರಿಗೆ ಗೂಂಡಾಗಳಿಂದ ಬೆದರಿಕೆ ಹಾಕಿಸುತ್ತಿದ್ದರು ಎಂದು ಯುವತಿ ಆರೋಪಿಸಿದ್ದಾರೆ.
ವಿಜಯಪುರದ ಹೊರ್ತಿ ಠಾಣೆಯ ಪಿಎಸ್ಐ ಪ್ರಕಾಶ್ ರಾಠೋಡ ಅವರ ವಿರುದ್ಧ ಆರೋಪ ಕೇಳಿ ಬಂದಿದೆ. ಈ ಸಂಬಂಧ ಜಮಖಂಡಿ ತಾಲೂಕಿನ ಬನಹಟ್ಟಿಯ ಯುವತಿಯೊಬ್ಬರು ಬಾಗಲಕೋಟೆ ಎಸ್ಪಿಗೆ ದೂರು ನೀಡಿದ್ದಾರೆ. ಪ್ರಕಾಶ್ ಅವರು ಬನಹಟ್ಟಿ ಠಾಣೆಯಲ್ಲಿ ಪಿಎಸ್ಐ ಆಗಿದ್ದಾಗ ಯುವತಿಯರಿಗೆ ಮೆಸೇಜ್ ಮಾಡುತ್ತಿದ್ದರು ಎಂದು ಯುವತಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
Comments