ನಿರುದ್ಯೋಗಿಗಳಿಂದ ಹಣ ಪಡೆದು ಪಂಗನಾಮ ಹಾಕಿದ ನಕಲಿ ಸೈನ್ಯಾಧಿಕಾರಿ

ಸೇನೆಯ ಅಧಿಕಾರಿಯಂತೆ ವೇಷ ಧರಿಸಿ ವ್ಯಕ್ತಿಯೊಬ್ಬ ಬೆಂಗಳೂರಿನ ಪ್ರಖ್ಯಾತ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಿರುದ್ಯೋಗಿಗಳಿಗೆ ನಂಬಿಸಿ ಮಡಿಕೇರಿ ಸೇರಿದಂತೆ ನಾನಾ ಜಿಲ್ಲೆಗಳಲ್ಲಿ ಹಲವರಿಗೆ ಲಕ್ಷಾಂತರ ರೂ. ವಂಚಿಸಿದ್ದಾನೆ.
ಬೆಂಗಳೂರಿನಲ್ಲಿ ಸ್ಕೂಲ್ ವ್ಯಾನ್ ಚಾಲಕನಾಗಿರುವ ಕಾಮರಾಜ್ ಎಂಬಾತನೇ ವಂಚಕ. ಈತ ನಿರುದ್ಯೋಗಿಗಳನ್ನು ಸಂಪರ್ಕಿಸಿ ಅವರಿಗೆ ಕೆಲಸ ಕೊಡಿಸುವುದಾಗಿ ಆಮಿಷ ತೋರಿಸುತ್ತಿದ್ದ. ನಂಬಿಸಿ ಲಕ್ಷಾಂತರ ರೂ. ಹಣ ಪಡೆಯುತ್ತಿದ್ದ. ಮಡಿಕೇರಿ, ಮಂಗಳೂರು ಮತ್ತು ಚಿಕ್ಕಮಗಳೂರಿನಲ್ಲಿ ಹಲವರಿಗೆ ವಂಚನೆ ಮಾಡಿ ತಲೆ ಮರೆಸಿಕೊಂಡಿದ್ದಾನೆ. ಇಷ್ಟೇ ಅಲ್ಲದೆ, ಈತ ಫೇಸ್ಬುಕ್ ಮತ್ತು ಸ್ನೇಹಿತರ ಮೂಲಕ ಯವತಿಯರ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ವಂಚಿಸುತ್ತಿದ್ದ ಎಂಬುದು ಬಯಲಾಗಿದೆ. ಈತ ಚೆನ್ನೈ ಮೂಲದ ಯುವತಿಯನ್ನು ವಿವಾಹವಾಗಿ ತನ್ನ ಮನೆಯಿಂದಲೇ 60 ಸಾವಿರ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದಾನೆ ಎಂದು ಕಾಮರಾಜ್ ಸಹೋದರ ಜೀವನ್ ಆರೋಪಿಸಿದ್ದಾರೆ.
Comments