ಪೊಲೀಸರ ದಾಂಧಲೆ, ಹೋಟೆಲ್ ಸಿಸಿ ಟಿವಿಯಲ್ಲಿ ಸೆರೆಯಾಯ್ತು

ಎಲೆಕ್ಷನ್ ಡ್ಯೂಟಿ ಮೇಲೆ ಬಂದಿದ್ದ ಪೊಲೀಸರು ಕಂಠಪೂರ್ತಿ ಕುಡಿದಿದ್ದರು ಅಂತಾ ಹೋಟೆಲ್ ಮ್ಯಾನೇಜರ್ ತಿಳಿಸಿದ್ದಾರೆ. ಹೋಟೆಲ್ ನಲ್ಲಿ ಕೋಣೆ ಖಾಲಿ ಇರಲಿಲ್ಲ, ಸಂಪೂರ್ಣ ಭರ್ತಿಯಾಗಿದೆ ಅಂತಾ ಮ್ಯಾನೇಜರ್ ತಿಳಿಸಿದ್ದಾರೆ.ಇದ್ರಿಂದ ಕೆರಳಿದ ಪೊಲೀಸರು ಹೋಟೆಲ್ ಸಿಬ್ಬಂದಿ ಮೇಲೆ ರೇಗಾಡಿದ್ದಾರೆ.
ಲಖ್ನೋನಲ್ಲಿ ಪೊಲೀಸ್ ಇಲಾಖೆಗೆ ಮುಜುಗರ ತರುವಂಥ ಕೃತ್ಯವೊಂದು ನಡೆದಿದೆ. ಹೋಟೆಲ್ ನಲ್ಲಿ ರೂಮ್ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು ದಾಂಧಲೆ ನಡೆಸಿದ್ದಾರೆ. ಅಲ್ಲದೆ ಹೋಟೆಲ್ ನ 2 ಕೋಣೆಗೆ ನುಗ್ಗಿದ ಪೊಲೀಸರು, ಅಲ್ಲಿಂದ ಹೊರಹೋಗುವಂತೆ ಗ್ರಾಹಕರನ್ನು ಬೆದರಿಸಿದ್ದಾರೆ. ಮನಬಂದಂತೆ ಅವರನ್ನು ಥಳಿಸಿದ್ದಾರೆ. ಹೋಟೆಲ್ ಕೋಣೆಗೆಲ್ಲಾ ನುಗ್ಗಿ ಅಲ್ಲಿದ್ದ ಮಹಿಳೆಯರ ಬಳಿ ಐಡಿ ಕಾರ್ಡ್ ತೋರಿಸುವಂತೆ ಸೂಚಿಸಿದ್ದಾರೆ. ಪೊಲೀಸರ ದಾಂಧಲೆ ಹೋಟೆಲ್ ಸಿಸಿ ಟಿವಿಯಲ್ಲೂ ಸೆರೆಯಾಗಿದೆ.
Comments