ಪರಿಚಯಸ್ಥ ರೌಡಿಗಳಿಂದಲೇ ಗೃಹಿಣಿಯ ಮೇಲೆ ಸಾಮೂಹಿಕ ಅತ್ಯಾಚಾರ

ಸಂತ್ರಸ್ತೆ ತನ್ನ ಪತಿಯ ಜೊತೆ ಸಿದ್ದನಹೊಸಹಳ್ಳಿ ಗ್ರಾಮದಲ್ಲಿ ವಾಸವಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಆಕೆಯನ್ನು ಅತ್ಯಾಚಾರ ಮಾಡಿರುವ ಆರೋಪಿಗಳು ಸಂತ್ರಸ್ತೆಗೆ ಮೊದಲಿನಿಂದಲೇ ಪರಿಚಯವಿದ್ದರು ಎನ್ನಲಾಗಿದೆ. ಕಳೆದ ಆರು ದಿನಗಳ ಹಿಂದೆ ಆರೋಪಿಗಳು ಕುಡಿದ ಮತ್ತಿನಲ್ಲಿ ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ಸಂತ್ರಸ್ತೆಯ ಮನೆಗೆ ನಾಲ್ವರು ಕಾಮುಕರು ಸೇರಿ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ.
ಘಟನೆ ನಡೆದು 6 ದಿವಸಗಳ ತರುವಾಯ ನೊಂದ ಸಂತ್ರಸ್ತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತೀವ್ರ ವಿಚಾರಣೆ ಆರಂಭಿಸಿದ್ದು, ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.
Comments