ರಾಮ್ ರಹೀಂ ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್

ರಾಮ್ ರಹೀಂ ಬಗ್ಗೆ ಮಹಿಳೆಯೊಬ್ಳು ವಿಭಿನ್ನ ಹೇಳಿಕೆ ನೀಡಿದ್ದಾಳೆ. ರಾಮ್ ರಹೀಂ ವಿರುದ್ಧ ಆರೋಪ ಮಾಡುವಂತೆ ಆತನ ಕಾರು ಚಾಲಕ ಖಟ್ಟಾ ಸಿಂಗ್ ತನ್ನನ್ನು ಒತ್ತಾಯಿಸಿದ್ದ ಅಂತಾ ಹೇಳಿಕೊಂಡಿದ್ದಾಳೆ.
ಪತ್ರಕರ್ತ ರಾಮ್ ಚಂದರ್ ಛತ್ರಪತಿ ಹಾಗೂ ಡೇರಾದ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ರಾಮ್ ರಹೀಂ ಕೈವಾಡವಿದೆ ಅಂತಾ ಖಟ್ಟಾ ಸಿಂಗ್ ಆರೋಪಿಸಿದ್ದ. ಈ ಬಗ್ಗೆ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದ. ಆದ್ರೆ ಖಟ್ಟಾ ಸಿಂಗ್ ಸೋದರ ಸೊಸೆ ಸುಮಿಂದರ್ ಕೌರ್ ಉಲ್ಟಾ ಹೊಡೆದಿದ್ದಾಳೆ. ಡೇರಾ ಸಚ್ಛಾ ಸೌಧಕ್ಕೆ ಕಳಂಕ ತರಲು ಖಟ್ಟಾ ಸಿಂಗ್ ಷಡ್ಯಂತ್ರ ಮಾಡಿದ್ದಾನೆ, ಅದರಲ್ಲಿ ಭಾಗಿಯಾಗಲು ಒಪ್ಪದೇ ಇದ್ದಿದ್ರಿಂದ ಹಲ್ಲೆ ಮಾಡಿದ್ದಾನೆ ಅಂತಾ ದೂರಿದ್ದಾಳೆ. ಪತ್ರಿಕಾಗೋಷ್ಠಿಯಲ್ಲಿ ಖಟ್ಟಾ ಸಿಂಗ್ ವಿರುದ್ಧ ಆರೋಪ ಮಾಡಿದ್ದಾಳೆ. ಡೇರಾ ಸಚ್ಛಾ ಸೌಧದಲ್ಲಿದ್ದ ಇಬ್ಬರು ಮಹಿಳಾ ಅನುಯಾಯಿಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ರಾಮ್ ರಹೀಂಗೆ 20 ವರ್ಷ ಜೈಲು ಶಿಕ್ಷೆಯಾಗಿದೆ. ರಾಮ್ ರಹೀಂ ವಿರುದ್ಧದ ಎರಡು ಕೊಲೆ ಪ್ರಕರಣದ ವಿಚಾರಣೆ ಕೂಡ ಅಂತಿಮ ಹಂತದಲ್ಲಿದೆ.
Comments