ಗಣಪತಿ ಸಾವಿನ ಪ್ರಕರಣದ ಬಗ್ಗೆ ಚುರುಕುಗೊಂಡ ಸಿಬಿಐ ತನಿಖೆ
ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಡಿವೈಎಸ್ಪಿ ನೇಣುಬಿಗಿದುಕೊಂಡು ಮಡಿಕೇರಿಯ ವಿನಾಯಕ ಲಾಡ್ಜ್ ನಲ್ಲಿ ಸಾವನ್ನಪ್ಪಿದ್ದರು. ಆದರೇ ಇಂತಹ ಕೊಟ್ಟಡಿಯಲ್ಲಿಯೇ ನಿನ್ನೆ ಸಿಬಿಐ ಅಧಿಕಾರಿಗಳು ಮಹಜರ್ ನಡೆಸುವ ವೇಳೆ ಒಂದು ಗುಂಡು ಪತ್ತೆಯಾಗಿದೆ. ಈ ಮೂಲಕ ಆತ್ಮಹತ್ಯೆಗೆ ಮತ್ತಷ್ಟು ತಿರುವನ್ನು ನೀಡಿದ್ದು, ಕೊಠಡಿಯಲ್ಲಿ ಗುಂಡು ಬಂದಿದ್ದಾದರೂ ಹೇಗೆ ಎಂಬ ಸಂಶಯವನ್ನು ಹುಟ್ಟು ಹಾಕಿದೆ.
ನಿನ್ನೆ ಗಣಪತಿ ಆತ್ಮಹತ್ಯೆ ಮಾಡಿಕೊಂಡಿದ್ದ ರೂಮ್ ನಲ್ಲಿ ಒಂದು ಗುಂಡು ದೊರೆಯುವ ಮೂಲಕ, ಇಂದಿನ ಸದನಕ್ಕೆ ಹಾಲು ತುಪ್ಪ ಸುರಿದಂತಾಗಿದೆ. ಈ ನಡುವೆ ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ಇಂದು ಗಣಪತಿ ಸಂಬಂಧಿಕರಿಗೆ ನೋಟೀಸ್ ಜಾರಿ ಮಾಡಿ, ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಈ ಹಿನ್ನಲೆಯಲ್ಲಿ ಇಂದು ಸಿಬಿಐ ಅಧಿಕಾರಿಗಳು, ಡಿವೈಎಸ್ಪಿ ಗಣಪತಿಯವರ ತಾಯಿ, ಸಹೋದರಿ ಸೇರಿದಂತೆ ಇತರರನ್ನು ವಿಚಾರಣೆ ನಡೆಸಲಿದ್ದಾರೆ. ಈ ನಡುವೆ ಇಂದು ಸಿಬಿಐ ತನ್ನ ತನಿಖೆಯನ್ನು ಚುರುಕುಗೊಳಿಸಿದ್ದು, ಮೊದಲ ಹಂತದಲ್ಲಿ ಡಿವೈಎಸ್ಪಿ ಗಣಪತಿಯವರ ಸಂಬಂಧಿಕರನ್ನು ವಿಚಾರಣೆ ನಡೆಸಲಿದೆ.
ಇಂದು ಗಣಪತಿ ಸಹೋದರಿ, ಗಣಪತಿ ತಾಯಿಗೆ ನೋಟೀಸ್ ಜಾರಿಗೊಳಿಸಿರುವ ಸಿಬಿಐ ಅಧಿಕಾರಿಗಳು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಹಿನ್ನಲೆಯಲ್ಲಿ ಇಂದು ಸಿಬಿಐ ಕಚೇರಿಗೆ ತೆರಳಲಿರುವ ಗಣಪತಿ ಸಹೋದರಿ ಹಾಗೂ ತಾಯಿ, ಸಿಬಿಐ ಅಧಿಕಾರಿಗಳಿಂದ ವಿಚಾರಣೆ ಎದುರಿಸಲಿದ್ದಾರೆ. ಈ ಎಲ್ಲಾ ವಿದ್ಯಾಮಾನಗಳ ನಡುವೆ ಇಂದು ಮೂರನೇಯ ದಿನದ ಚಳಿಗಾಲದ ಉಭಯ ಸದನಗಳ ಕಲಾಪ ಬೆಳಗಾವಿಯಲ್ಲಿ ಆರಂಭಗೊಳ್ಳಲಿದೆ. ಕಳೆದ ನಿನ್ನೆ ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಸಚಿವ ಚಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಸದನಗಳಲ್ಲಿ ಗದ್ದಲ, ಕೋಲಾಹಲ ಸೃಷ್ಠಿಸಿತ್ತು. ಇಂದೂ ಈ ಪಟ್ಟನ್ನು ಮುಂದುವರೆಸಲಿರುವ ಪ್ರತಿಪಕ್ಷದ ನಾಯಕರೂ, ಜಾರ್ಜ್ ರಾಜೀನಾಮೆಗೆ ಒತ್ತಾಯಿಸಲಿದ್ದಾರೆ.
Comments