ಬೇರೆ ನಿಲ್ದಾಣದಲ್ಲಿ ನಿಲ್ಲಿಸಿ, ಬಸ್ ಬತ್ತಿ ಊರು ಸೇರಿಕೊಳ್ಳುವಂತೆ ಹೇಳಿ ಶಾಕ್ ನೀಡಿದ ಪಾಕ್ ವಿಮಾನ

ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳು ಮಾರ್ಗ ಬದಲಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಪಾಕಿಸ್ತಾನ ವಿಮಾನವೊಂದು ಬೇರೆ ನಿಲ್ದಾಣದಲ್ಲಿ ನಿಲ್ಲಿಸಿ., ಅಲ್ಲಿಂದ ಬಸ್ ಹತ್ತಿ ಊರು ಸೇರಿಕೊಳ್ಳುವಂತೆ ಹೇಳಿ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳು ಮಾರ್ಗ ಬದಲಿಸುವುದು ಸಾಮಾನ್ಯವಾಗಿರುತ್ತದೆ. ಆದರೆ ಪಾಕಿಸ್ತಾನ ವಿಮಾನವೊಂದು ಬೇರೆ ನಿಲ್ದಾಣದಲ್ಲಿ ನಿಲ್ಲಿಸಿ., ಅಲ್ಲಿಂದ ಬಸ್ ಹತ್ತಿ ಊರು ಸೇರಿಕೊಳ್ಳುವಂತೆ ಹೇಳಿ ಪ್ರಯಾಣಿಕರಿಗೆ ಶಾಕ್ ನೀಡಿದೆ.
ಅಬುಧಾಬಿಯಿಂದ ಪಾಕ್ ನ ರಹೀಂ ಯಾರ್ ಖಾನ್ ಗೆ ಶನಿವಾರ ಹೊರಟ್ಟಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ಸಂಸ್ಥೆ ಮಂದ ಗೋಚರತೆಯಿಂದಾಗಿ ಲಾಹೋರ್ ನಲ್ಲೇ ವಿಮಾನ ವನ್ನು ಇಳಿಸಿದೆ. ಜತೆಗೆ ನೀವು ತೆರಳಬೇಕಾದಲ್ಲಿಗೆ ಬಸ್ ಮೂಲಕ ಹೋಗಿ ಎಂದು ಪ್ರಯಾಣಿಕರಿಗೆ ಸಿಬ್ಬಂದಿ ಹೇಳಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪ್ರಯಾಣಿಕರು ಇಳಿಯಲು ಸಾಧ್ಯವಾಗದೇ ಇದ್ದಾಗ ಅಲ್ಲಿನ ಸಿಬ್ಬಂದಿ ಎಸಿ ಆಫ್ ಮಾಡಿದ್ದಾರೆ. ತಕ್ಷಣ ಉಸಿರುಗಟ್ಟಿಸುವಂತಹ ವಾತಾವರಣ ಉಂಟಾಗಿ ಅಲ್ಲಿನ ಪ್ರಯಾಣಿಕರು ಕೆಳಗೆ ಇಳಿದಿದ್ದಾರೆ ಎಂದು ಪ್ರಯಾಣಿಕರು ದೂರಿದ್ದಾರೆ.
Comments