ಬ್ಲ್ಯಾಕ್ ಮನಿ ಪಾನಮ್ ನಂತರ ಪ್ಯಾರಾಡೈಸ್ ಪೇಪರ್ಸ್ ಆಟ ಶುರು

ನವದೆಹಲಿ: ಪಾನಮ್ ಪೇಪರ್ಸ್ ಬಳಿಕ ಈಗ ಪ್ಯಾರಾಡೈಸ್ ಪೇಪರ್ಸ್ ಪಟ್ಟಿ ಅಲ್ಲೋಲಕಲ್ಲೋಲ ಸೃಷ್ಠಿಸಿದೆ. ಬರ್ಮುಡಾ ಮೂಲದ ಆ್ಯಪಲ್ ಬೈ ಮತ್ತು ಸಿಂಗಾಪುರ ಮೂಲದ ಏಷಿಯಾಸಿಟಿ ಟ್ರಸ್ಟ್ ನಡೆಸಿದ ತನಿಖೆಯಿಂದ ಹೊರಬಿದ್ದ 1.34ಕೋಟಿ ದಾಖಲೆಗಳನ್ನು ಪ್ಯಾರಾಡೈಸ್ ಪೇಪರ್ಸ್ ಹೆಸರಲ್ಲಿ ಬಿಡುಗಡೆ ಮಾಡಿದೆ.
ನವದೆಹಲಿ: ಪಾನಮ್ ಪೇಪರ್ಸ್ ಬಳಿಕ ಈಗ ಪ್ಯಾರಾಡೈಸ್ ಪೇಪರ್ಸ್ ಪಟ್ಟಿ ಅಲ್ಲೋಲಕಲ್ಲೋಲ ಸೃಷ್ಠಿಸಿದೆ. ಬರ್ಮುಡಾ ಮೂಲದ ಆ್ಯಪಲ್ ಬೈ ಮತ್ತು ಸಿಂಗಾಪುರ ಮೂಲದ ಏಷಿಯಾಸಿಟಿ ಟ್ರಸ್ಟ್ ನಡೆಸಿದ ತನಿಖೆಯಿಂದ ಹೊರಬಿದ್ದ 1.34ಕೋಟಿ ದಾಖಲೆಗಳನ್ನು ಪ್ಯಾರಾಡೈಸ್ ಪೇಪರ್ಸ್ ಹೆಸರಲ್ಲಿ ಬಿಡುಗಡೆ ಮಾಡಿದೆ. ಬಾಲಿವುಡ್ ಹಿರಿ ನಟ ಅಮಿತಾಬ್ ಬಚ್ಚನ್,. ಕೇಂದ್ರ ಸಚಿವ ಜಯಂತ್ ಸಿನ್ಹಾ , ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯ್ಲಿ , ನಟ ಸಂಜಯ್ ದತ್ತ ಪತ್ನಿ ಮಾನ್ಯತಾ ದತ್, ಕಾಂಗ್ರೆಸ್ ಮುಖಂಡ ವಯ್ಲಾರ್ ರವಿ ಸೇರಿದಂತೆ ಭಾರತದ 714 ಗಣ್ಯರ ಹೆಸರು ಈ ಪಟ್ಟಿಯಲ್ಲಿದೆ. ಇನ್ನು ಬ್ರಿಟನ್ ರಾಣಿ 2ನೇ ಎಲಿಜಬೆತ್ ಒಡೆತನದ ಖಾಸಗಿ ಎಸ್ಟೇಟ್ ಕೇಮ್ ನ ದ್ವೀಪದಲ್ಲಿ ಗೌಪ್ಯವಾಗಿ ಹೂಡಿಕೆ ಮಾಡಿದೆ ಎಂದು ಪೇಪರ್ಸ್ ಬಯಲು ಮಾಡಿದ್ದು, 119 ವರ್ಷಗಳ ಹಳೆಯದಾದ ಆ್ಯಪಲ್ ಕಂಪನಿ ವಕೀಲರು ಲೆಕ್ಕ ಪರಿಶೋಧಕರು, ಬ್ಯಾಂಕ್ ಅಧಿಕಾರಗಳ ಮತ್ತು ತನಿಖಾಧಿಕಾರಿಗಳ ಜಾಲ ಹೊಂದಿದೆ.
ಪಾಕಿಸ್ತಾನದ ಪ್ರಧಾನಿ ಶೌಕತ್ ಅಜೀಜ್ , ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ ಆಪ್ತ ಸ್ಟೀಫನ್ ಬ್ರಾಂಫ್ ಮ್ಯಾನ್ , ಅಮೆರಿಕಾದ ವಾಣಿಜ್ಯ ಕಾರ್ಯದರ್ಶಿ ವಿಲ್ಪುರ್ ರೋಸ್ ಹೆಸರು ಕೂಡ ಸಂಬಂಧಿತ ಕಂಪನಿಗಳಿಗೆ ವಂಚನೆ ಆರೋಪ ಪಟ್ಟಿಯಲ್ಲಿ ಸೇರಿದ್ದು, ಈ ಪಟ್ಟಿಯಲ್ಲಿರುವ ಭಾರತೀಯರ ಸಂಖ್ಯೆ ಆಧಪಿಸಿ 19 ಸ್ಥಾನ ಭಾರತಕ್ಕೆ ನೀಡಲಾಗಿದೆ. ಸುಮಾರು 180 ದೇಶಗಳ ಗಣ್ಯರು ಮತ್ತು ವಿವಿಧ ಕಾರ್ಪೋರೇಟ್ ಕಂಪನಿಗಳ ಬಂಡವಾಳ ಇಲ್ಲಿ ಬಯಲಾಗಿದೆ. ಪನಾಮ ಹಗರಣದಲ್ಲಿ ಸೋರಿಕೆಯಾದ ಮಾಹಿತಿ ಪ್ರಮಾಣ 2.6 ಟಿಬಿಯಾದರೆ, ಪ್ಯಾರಾಡೈಸ್ ಪೇಪರ್ಸ್ ನಲ್ಲಿ 1.4 ಟಿಬಿ ದಾಖಲೆ ಸೋರಿಕೆಯಾಗಿದೆ.
Comments