ಪಳನಿಸ್ವಾಮಿ ಅವರ ವ್ಯಂಗ್ಯಚಿತ್ರ ಬರೆದ ಜಿ.ಬಾಲು ಬಂಧನ

06 Nov 2017 1:15 PM | Crime
254 Report

ತಿರುನೆಲ್ವೇಲಿ ಕಲೆಕ್ಟರ್ ಕಚೇರಿ ಆವರಣದಲ್ಲಿ ಕೂಲಿಕಾರ ಕುಟುಂಬವೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿರುದ್ಧ ವ್ಯಂಗ್ಯಚಿತ್ರ ಬರೆದು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಜಿ.ಬಾಲು ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಾಲು ಅವರು ಈ ವ್ಯಂಗ್ಯಚಿತ್ರವನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಮಾಡಿದ್ದರು. ತಮಿಳುನಾಡಿನಾದ್ಯಂತ ಅತೀವ ಜನಪ್ರಿಯರಾಗಿರುವ ಬಾಲು ಅವರ ಈ ಕಾರ್ಟೂನು 40 ಸಾವಿರಕ್ಕೂ ಹೆಚ್ಚು ಶೇರ್ ಆಗಿವೆ. ಈ ವ್ಯಂಗ್ಯಚಿತ್ರದಲ್ಲಿ ಸುಟ್ಟುಹೋಗುತ್ತಿರುವ ಮಗುವನ್ನು ರಕ್ಷಿಸದೇ ಪೊಲೀಸ್ ಕಮಿಷನರ್, ನೆಲ್ಲೈ ಕಲೆಕ್ಟರ್ ಮತ್ತು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಹಣದ ಕಂತೆ ಮೂಲಕ ತಮ್ಮ ಮಾನ ಮುಚ್ಚಿಕೊಳ್ಳಲು ಯತ್ನಿಸುತ್ತಿರುವಂತೆ ಬಿಂಬಿಸಲಾಗಿದೆ. ಇದು ತಮಿಳುನಾಡು ಸರಕಾರಕ್ಕೆ ಇರಿಸುಮುರುಸು ಉಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಜಿ.ಬಾಲು ಬಂಧನವಾಗಿದೆ ಎನ್ನಲಾಗಿದೆ.

Edited By

Hema Latha

Reported By

Madhu shree

Comments