ಕಮಲ್ ಹಾಸನ್ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲು
ನಟ ಕಮಲ್ ಹಾಸನ್ ವಿರುದ್ಧ ಸೆಕ್ಷನ್ 500 (ಮಾನನಷ್ಟ ಮೊಕದ್ದಮೆ) 511, 298 ( ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿರುವುದು) 295 (ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದಂತೆ ಆಕ್ರೋಶ ಕೆರಳಿಸುವುದು) 505 (ಧರ್ಮಗಳ ನಡುವೆ ಸಂಘರ್ಷ ಉಂಟುಮಾಡುವ ಉದ್ದೇಶ) ಪ್ರಕಾರ ಪ್ರಕರಣ ದಾಖಲಿಸಲಾಗಿದೆ.
ಈ ವರೆಗೂ ಮಾತುಕತೆಗೆ ಮುಂದಾಗುತ್ತಿದ್ದ ಬಲಪಂಥೀಯ ಸಂಘಟನೆಗಳು ಈಗ ಹಿಂಸಾಚಾರಕ್ಕೆ ಮುಂದಾಗುತ್ತಿವೆ, ಯಾರಾದರೂ ಹಿಂದೂ ಭಯೋತ್ಪಾದನೆ ಇದೆ ಎಂದರೆ ಅದನ್ನು ಬಲಪಂಥೀಯರು ನಿರಾಕರಿಸಲು ಸಾಧ್ಯವಿಲ್ಲ ಏಕೆಂದರೆ ಅವರ ಕ್ಯಾಂಪ್ ನಲ್ಲೂ ಭಯೋತ್ಪಾದನೆ ನುಸುಳಿದೆ, ಇದರಿಂದ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದರು. ಕಮಲ್ ಹಾಸನ್ ಹೇಳಿಕೆಯನ್ನು ಬಿಜೆಪಿ ನಾಯಕ ವಿನಯ್ ಕಟಿಯಾರ್, ಸುಬ್ರಹ್ಮಣಿಯನ್ ಸ್ವಾಮಿ ಸೇರಿದಂತೆ ಹಲವರು ಟೀಕಿಸಿ, ಖಂಡಿಸಿದ್ದರು.
Comments