ನಾಪತ್ತೆಯಾಗಿದ್ದ ದಯಾನಂದ ಸ್ವಾಮಿ ಪ್ರತ್ಯಕ್ಷ

ವಿಡಿಯೋದಲ್ಲಿ ತನ್ನ ಮೇಲೆ ಬಂದಿರುವ ಆರೋಪವೆಲ್ಲ ಸುಳ್ಳು ಎಂದು ದಯಾನಂದ ಸ್ವಾಮಿ ಹೇಳಿದ್ದಾನೆ. 2014ರಲ್ಲಿ ಪ್ರೀ ಪ್ಲಾನ್ ಮಾಡಿ ವಿಡಿಯೋ ಮಾಡಲಾಗಿದೆ. ನನಗೆ ಇದು ಮುಜುಗರವನ್ನುಂಟು ಮಾಡಿದೆ. ಈ ವಿಡಿಯೋ ಹೆಸರು ಹೇಳಿ ನಾಲ್ಕು ವರ್ಷಗಳ ಹಿಂದೆಯೇ ನನ್ನ ಮುಂದೆ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎಂದು ದಯಾನಂದ ಸ್ವಾಮಿ ಹೇಳಿದ್ದಾನೆ.
ಹುಣಸಮಾರನಹಳ್ಳಿ ಮಠದಲ್ಲಿ ದಯಾನಂದ ಸ್ವಾಮಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಾಪತ್ತೆಯಾಗಿದ್ದ ದಯಾನಂದ ಸ್ವಾಮಿ ಪ್ರತ್ಯಕ್ಷನಾಗಿದ್ದಾನೆ. ಸ್ವಾಮಿ ಅಜ್ಞಾತ ಸ್ಥಳದಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾನೆ. ಹಿಮಾಚಲ್, ಬಸವರಾಜ್ ಸೇರಿದಂತೆ ನಾಲ್ವರ ವಿರುದ್ಧ ಆರೋಪ ಮಾಡಿರುವ ಸ್ವಾಮಿ ಪಿತೂರಿ ಮಾಡಿದವರ ವಿರುದ್ಧ ದೂರು ನೀಡುವುದಾಗಿ ಹೇಳಿದ್ದಾನೆ. ಹಾಗೆ ಮಠದ ಕೆಲ ಪರಿಸ್ಥಿತಿಗಳ ಬಗ್ಗೆ ವಿಡಿಯೋದಲ್ಲಿ ಹೇಳಿದ್ದಾನೆ.
Comments