ಹತ್ಯೆ ಆರೋಪ ಬಿಜೆಪಿ ಶಾಸಕ ಮೇಲೆ ಕೇಸ್ ದಾಖಲು

ಉತ್ತರಪ್ರದೇಶ: ಉತ್ತರಪ್ರದೇಶದ ಬಾಗಾಪತ್ ಜಿಲ್ಲೆಯಲ್ಲಿ ಚುನಾವಣಾ ತಯಾರಿ ಸಂಬಂಧ ವ್ಯಕ್ತಿಯೊಬ್ಬನ ಹತ್ಯೆ ನಡೆಸಲಾಗಿದೆ. ಹತ್ಯೆಯಲ್ಲಿ ಭಾಗಿಯಾದ ಶಂಕೆಯ ಮೇರೆಗೆ ಬಿಜೆಪಿಯ ಶಾಸಕ ಸೇರಿ ಒಟ್ಟು 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಉತ್ತರಪ್ರದೇಶ: ಉತ್ತರಪ್ರದೇಶದ ಬಾಗಾಪತ್ ಜಿಲ್ಲೆಯಲ್ಲಿ ಚುನಾವಣಾ ತಯಾರಿ ಸಂಬಂಧ ವ್ಯಕ್ತಿಯೊಬ್ಬನ ಹತ್ಯೆ ನಡೆಸಲಾಗಿದೆ. ಹತ್ಯೆಯಲ್ಲಿ ಭಾಗಿಯಾದ ಶಂಕೆಯ ಮೇರೆಗೆ ಬಿಜೆಪಿಯ ಶಾಸಕ ಸೇರಿ ಒಟ್ಟು 9 ಜನರ ವಿರುದ್ಧ ಕೇಸ್ ದಾಖಲಿಸಲಾಗಿದ್ದು. ಬಿಜೆಪಿಯ ಶಾಸಕ ಕೃಷ್ಣಪಾಲ ಮಾಲಿಕ್ ಹಾಗೂ ಜಿಲ್ಲಾ ಪಂಚಾಯತಿ ಸದಸ್ಯ ತೋಮರ್ ಮೇಲೆ ಹತ್ಯೆಯ ಒಳಸಂಚು ಆರೋಪ ಇದೆ.
ಪೊಲೀಸ್ ಮೂಲಗಳ ಪ್ರಕಾರ, ರವಿವಾರದಂದು ಹಿಲ್ ವಾಡಿ ಹಳ್ಳಿಲ್ಲಿ ಗ್ರಾಮದ ಮುಖ್ಯಸ್ಥ ಚುನಾವಣೆಗಾಗಿ ತಯಾರಿ ಮಾಡಿಕೊಳ್ಳಲಾಗುತ್ತಿತ್ತು. ಕಳೆದ ರವಿವಾರ ರಾಮ್ ವೀರ್ ಎಂಬಾತರು ಚುನಾವಣೆಗಾಗಿ ಹೊರಗಡೆಯೇ ಇದ್ದರು. ಈ ವೇಳೆ ಮಹಿಪಾಲ್ ಪಕ್ಷದ ವ್ಯಕ್ತಿಯೊಬ್ಬನ ಜತೆಗೆ ಘರ್ಷಣೆ ಆಗಿತ್ತು. ಇಬ್ಬರ ಮಧ್ಯೆ ನಡೆದ ಮಾರಾಮಾರಿಯಲ್ಲಿ ಐದು ಜನರಿಗೆ ಗುಂಡು ತಗುಲಿತ್ತು. ಈ ಘಟನೆ ಸಂಬಂಧ ರಾಮ್ ವೀರ್ ಪುತ್ರ ಕೇಸ್ ದಾಖಲಿಸಿದ್ದ.
Comments