ಡ್ಯಾನ್ಸ್ ಮಾಸ್ಟರ್ ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ

ಡ್ಯಾನ್ಸ್ ಮಾಸ್ಟರ್ ಸತೀಶ್(28), ಚಂದನಾ ನಿಯಮಿತವಾಗಿ ಡ್ಯಾನ್ಸ್ ಕ್ಲಾಸ್ ಗೆ ಹಾಜರಾಗುವುದಿಲ್ಲ ಎಂದು ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿ ಪೋಷಕರು ಆರೋಪಿಸಿದ್ದಾರೆ. ಮೃತ ಬಾಲಕಿಯ ಪೋಷಕರು ಸತೀಶ್ ನನ್ನು ಥಳಿಸಿದ್ದು, ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಡ್ಯಾನ್ಸ್ ಕ್ಲಾಸ್ ಮಾಸ್ಟರ್ ಸತೀಶ್ ಎಂಬಾತನ ಕಿರುಕುಳಕ್ಕೆ ಬೇಸತ್ತ ಚಂದನಾ ಎಂಬ ಬಾಲಕಿ ಡ್ಯಾನ್ಸ್ ಕ್ಲಾಸ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕುಮಾರ್ ಮತ್ತು ಜ್ಯೋತಿ ಎಂಬುವರ ಪುತ್ರಿ ಚಂದನಾ ಖಾಸಗಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಬದರಿನಾಥ ಡ್ಯಾನ್ಸ್ ಶಾಲೆಗೆ ಬಂದ ಆಕೆ ಬ್ಯಾಗ್ ನಲ್ಲಿ ವಿಷ ತಂದು ಕುಡಿದಿದ್ದಾಳೆ.ಇದನ್ನು ಗಮನಿಸಿದ ಇತರೆ ವಿದ್ಯಾರ್ಥಿಗಳು ತರಬೇತಿ ದಾರನಿಗೆ ಹೇಳಿದ್ದಾರೆ. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಾಳೆ. ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಂದನಾ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Comments