ಬ್ಯುಸಿನೆಸ್ ಮ್ಯಾನ್ ಕೊಲೆ ಮಾಡಿ 30 ಲಕ್ಷ ರೂ. ಲೂಟಿ

ಬೆಳಿಗ್ಗೆ ಅಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಅಪರಿಚಿತ ವ್ಯಕ್ತಿಗಳು ಇಬ್ಬರು, ಓರ್ವ ಬ್ಯುಸಿನೆಸ್ ಮ್ಯಾನ್ ನನ್ನು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
ಬೆಳಿಗ್ಗೆ ಅಲ್ಲಿ ಗುಂಡಿನ ಸದ್ದು ಕೇಳಿಸಿತ್ತು. ಅಪರಿಚಿತ ವ್ಯಕ್ತಿಗಳು ಇಬ್ಬರು, ಓರ್ವ ಬ್ಯುಸಿನೆಸ್ ಮ್ಯಾನ್ ನನ್ನು ಗುಂಡಿಟ್ಟು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದುಡ್ಡಿಗಾಗಿ ಈ ಕೊಲೆ ನಡೆದಿದೆ ಎನ್ನಲಾಗಿದ್ದು, ಆರೋಪಿಗಳು ಕೊಲೆ ಮಾಡಿ 30 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ.
ಫೈರಿಂಗ್ ನಲ್ಲಿ ಗಾಯಾಳು ಹರೀಶ್ ಹಾಗೂ ಪಂಕಜ್ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಘಟನೆ ಸರಿ ಸುಮಾರು 10ಕ್ಕೆ ನಡೆದಿದೆ. ಪಂಕಜ್ ಎಂಬ ಉದ್ಯಮಿಯೊಬ್ಬರು ತಮ್ಮ ಕಾರಿನಲ್ಲಿ ಹರೀಶ್, ಅಮಿತ್ ಹಾಗೂ ರಾಕೇಶ್ ಎಂಬುವವರ ಜತೆಗೆ ಹತ್ತಿರದ ಬ್ಯಾಂಕ್ ವೊಂದರಲ್ಲಿ ಹಣ ಜಮಾ ಮಾಡಲು ಹೋಗುತ್ತಿದ್ದರು.
ರಸ್ತೆ ಮಧ್ಯೆ ಹೋಗುತ್ತಿದ್ದ ವೇಳೆ ನಾಲ್ಕು ಜನ ಯುವಕರು ಕಾರಿನಲ್ಲಿದ್ದವರನ್ನು ತಡೆದಿದ್ದಾರೆ ಎನ್ನಲಾಗಿದೆ. ನಾಲ್ಕು ಜನ ದುಷ್ಕರ್ಮಿಗಳು ಇದ್ದಕ್ಕಿದಂತೆ ಅವರ ಮೇಲೆ ಫೈರಿಂಗ್ ನಡೆಸಲು ಶುರು ಮಾಡಿದರು. ಕಾರಿನಲ್ಲಿದ್ದ ಮೂವರಿಗೆ ಗುಂಡುಗಳು ತಗುಲಿದ್ದವು. ಬಳಿಕ ದುಷ್ಕರ್ಮಿಗಳು 30 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Comments