ಧಾರವಾಹಿ ವೀಕ್ಷಿಸಿ ಹತ್ಯೆಗೈದರು
ದೆಹಲಿ: ರಾಜಧಾನಿಯಲ್ಲಿ 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಹತ್ಯೆ ಧಾರವಾಹಿ ವೀಕ್ಷಿಸಿ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ನವದೆಹಲಿಯ ಮೆಹರೌಲಿ ಪ್ರದೇಶದ ವಿದ್ಯಾರ್ಥಿ ಜತಿನ್ ಗೋಯೆಲ್ ಎಂಬಾತನನ್ನು ಹತ್ಯೆ ಗೈಯಲಾಗಿದೆ.
ದೆಹಲಿ: ರಾಜಧಾನಿಯಲ್ಲಿ 12ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಹತ್ಯೆ ಧಾರವಾಹಿ ವೀಕ್ಷಿಸಿ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ. ನವದೆಹಲಿಯ ಮೆಹರೌಲಿ ಪ್ರದೇಶದ ವಿದ್ಯಾರ್ಥಿ ಜತಿನ್ ಗೋಯೆಲ್ ಎಂಬಾತನನ್ನು ಹತ್ಯೆ ಗೈಯಲಾಗಿದೆ. ಶನಿವಾರದಂದು ಶನಿ ಧಾಮ ದೇವಸ್ಥಾನಕ್ಕೆ ತೆರಳಿದ್ದ, ರಾತ್ರಿಯಾದ್ರು ಮನೆಗೆ ಬಾರದ ಜತಿನ್ , ಬಳಿಕ ಕುಟುಂಬದವರು ಆತನ ಮೊಬೈಲ್ ಗೆ ಕರೆ ಮಾಡಿದ್ದರು.
ಮೊದಲಿಗೆ ಫೋನ್ ಕಟ್ ಆಗಿತ್ತು. ಆಮೇಲೆ ಜತಿನ್ ನಂಬರ್ ನಿಂದ ಒಂದು ಕಾಲ ಬಂದಿತ್ತು. ಕರೆ ಮಾಡಿ ಜತಿನ್ ನನ್ನು ಕಿಡ್ನಾಪ್ ಮಾಡಲಾಗಿದೆ ಎಂಬ ಮಾಹಿತಿ ದೊರಕಿತ್ತು. ಜತಿನ್ ಬಿಡುಗಡೆಗಾಗಿ ಕಿಡ್ನಾಪರ್ ಸುಮಾರು 20 ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರು. ಈ ವೇಳೆ ವಿದ್ಯಾರ್ಥಿ ಕುಟುಂಬದವರು ಪೊಲೀಸ್ ಗೆ ದೂರು ಸಲ್ಲಿಸಿದ್ದರು. ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದರು. ಆರೋಪಿಗಳ ಪತ್ತೆ ಮಾಡಿದಾಗ ಆತನ ಸಹಪಾಠಿಗಳೇ ಈ ಕೃತ್ಯ ವೆಸಗಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ ಜತಿನ್ ನನ್ನು ಕಿಡ್ನಾಪ್ ಮಾಡಿ ಹತ್ಯೆಗೈದಿರುವುದಾಗಿ ಆರೋಪಿಗಳು ಪೊಲೀಸರ ಎದುರು ಬಾಯಿ ಬಿಟ್ಟಿದ್ದಾರೆ. ಕೃತ್ಯವೆಸಗಲು ಕ್ರೈಮ್ ಧಾರವಾಹಿಯನ್ನು ವೀಕ್ಷಿಸಿ ಕಿಡ್ಯ್ನಾಪ್ ಗೆ ಸಂಚು ರೂಪಿಸಿದ್ದರು ಎನ್ನಲಾಗಿದೆ.
Comments