ನೋಡು ನೋಡುತ್ತಿದ್ದಂತೆ ಹೊತ್ತಿ ಉರಿದ ಬಸ್
ರಾಮಗಢ: ಜಾರ್ಖಂಡ್ ನ ರಾಮಗಢ್ ಜಿಲ್ಲೆಯ ರಾಂಚಿ ಹಾಗೂ ಪಟ್ನಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ವೊಂದು ಧಗ ಧಗನೆ ಉರಿದ ಘಟನೆ ವರದಿಯಾಗಿದೆ.
ರಾಮಗಢ: ಜಾರ್ಖಂಡ್ ನ ರಾಮಗಢ್ ಜಿಲ್ಲೆಯ ರಾಂಚಿ ಹಾಗೂ ಪಟ್ನಾ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ವೊಂದು ಧಗ ಧಗನೆ ಉರಿದ ಘಟನೆ ವರದಿಯಾಗಿದೆ. ಯಾಂತ್ರಿಗಳನ್ನು ಕರೆದೊಯ್ಯಲಾಗುತ್ತಿದ್ದ ಬಸ್ ರಾಮಗಢ್ ನ ಕಾಕೇಬಾರ್ ಬೈಪಾಸ್ ಚೌಕ್ ಗೆ ಬರುತ್ತಿದ್ದಂತೆ ಆಕಸ್ಮಿಕವಾಗಿ ಬಸ್ ಗೆ ಬೆಂಕಿ ಹತ್ತಿಕೊಂಡಿದೆ. ಕೆಲ ಸಮಯದಲ್ಲೇ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಬಸ್ ಸುಟ್ಟು ಕರಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅದೃಷ್ಟವಶಾತ ಬಸ್ ನಲ್ಲಿದ್ದ ಯಾಂತ್ರಿಕರು ಸುರಕ್ಷಿತವಾಗಿದ್ದು, ಘಟನೆಗೆ ಕಾರಣ ಬಸ್ ಟೈರ್ ಒಡೆದಿದೆ. ಇದರಿಂದ ಬಸ್ ಟೈರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
Comments