ಪರಪ್ಪನ ಅಗ್ರಹಾರ ಜೈಲಿನ ಕರಾಳ ಸತ್ಯ ಬಿಚ್ಚಿಟ್ಟ ಡಿ ರೂಪ

ಇತ್ತೀಚೆಗೆ ಮಹಿಳೆಯೊಬ್ಬರ ಕೈ ಹಿಡಿದುಕೊಂಡಿದ್ದ ಶಿವಕುಮಾರ್ ಫೋಟೋ ವೈರಲ್ ಆಗಿತ್ತು. ಈ ಫೋಟೋದ ಬಗ್ಗೆ ಹೆಚ್ಚಿನ ವಿವರಗಳಿಲ್ಲ. ಆದರೆ, ಚಿತ್ರದಲ್ಲಿ ಕಾಣಿಸುವ ಗೋಡೆ ನೋಡಿದರೆ ಇದು ಜೈಲಿನ ಹೊರಗೆ ತೆಗೆದ ಫೋಟೋ ಎಂಬ ಅನುಮಾನಗಳಿವೆ ಎಂದು ಮಾಜಿ ಡಿಐಜಿ ಡಿ. ರೂಪಾ ಹೇಳಿದ್ದಾರೆ.
ಎಚ್.ಪಿ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಎಂಬಾಕೆಯನ್ನು 7 ವರ್ಷಗಳ ಹಿಂದೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿತ್ತು. ಈ ಕೊಲೆ ಮಾಡಿದ ಶಿವಕುಮಾರ್ ಎಂಬಾತನಿಗೆ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಲ್ಲಿದ್ದಾನೆ. ಆದರೆ ಆತ ಇಲ್ಲೂ ತನ್ನ ಸಾಮ್ರಾಜ್ಯ ಕಟ್ಟಿಕೊಂಡು ಮೆರೆದಾಡುತ್ತಿದ್ದಾನೆ ಎಂಬುದೇ ಈ ಕಥೆ. ಆಕೆ ಹೋಮ್ ಗಾರ್ಡ್ ಸಿಬ್ಬಂದಿಯಾಗಿದ್ದು ವೈದ್ಯಕೀಯ ಚಿಕಿತ್ಸೆ ಪಡೆಯಲು ಶಿವಕುಮಾರ್ ಜೈಲಿನಿಂದ ಹೊರ ಬಂದಿದ್ದ ಸಂದರ್ಭ ತೆಗೆದ ಫೋಟೋ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹೇಳಲಾಗಿದೆ. ಈ ಕುರಿತು ಬಂದೀಖಾನೆ ವಿಭಾಗದ ಮಾಜಿ ಡಿಐಜಿ ಡಿ. ರೂಪಾ 'ದಿ ನ್ಯೂಸ್ ಮಿನಿಟ್'ಗೆ ಪ್ರತಿಕ್ರಿಯೆ ನೀಡಿದ್ದು, 'ನಾನು ಜೈಲಿನಲ್ಲಿರುವ ಖೈದಿಗಳ ಬಳಿ ವಿಚಾರಿಸಿದಾಗ ಮುಖ್ಯ ಸೂಪರಿಂಟೆಂಡೆಂಟ್ ಕೃಷ್ಣ ಕುಮಾರ್ ಖೈದಿಗಳ ಸಣ್ಣ ತಂಡವನ್ನು ಇಟ್ಟುಕೊಂಡಿದ್ದು ಇವರೇ ಲಂಚದ ಹಣ ಸಂಗ್ರಹ ಮೊದಲಾದವನ್ನು ಮಾಡುತ್ತಾರೆ ಎಂದಿದ್ದರು. ಪೆರೋಲ್ ಪಡೆಯಲು, ತಮ್ಮವನ್ನು ಭೇಟಿಯಾಗಲು, ಮನೆಯಿಂದ ತಂದ ಆಹಾರ ತಿನ್ನಲು ಹೀಗೆ ಹಲವು ಕಾರಣಗಳಿಗೆ ಜೈಲಿನಲ್ಲಿ ಲಂಚ ಸಂಗ್ರಹಿಸಲಾಗುತ್ತದೆ. ಇದೇ ಖೈದಿಗಳು ಜೈಲಿನಲ್ಲಿ ನೈಟ್ ವಾಚ್ ಮನ್ ಗಳಾಗಿ ಕಾರ್ಯನಿರ್ವಹಿಸುತ್ತಾರೆ. ಈ ತಂಡಕ್ಕೆ ಶಿವಕುಮಾರನೇ ನಾಯಕ ಎಂದು ನಾನು ಕೇಳಲ್ಪಟ್ಟಿದ್ದೇನೆ,' ಎಂದಿದ್ದಾರೆ. ಆದರೆ ವೈರಲ್ ಆಗಿರುವ ಫೋಟೋ ನಕಲಿ ಎಂಬುದು ಆಂತರಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಜೈಲಿನ ಅಧಿಕಾರಿಗಳು ಹೇಳಿದ್ದಾರೆ. ನಾನು ಈ ಚಿತ್ರ ನೋಡಿಲ್ಲ. ಆದರೆ ಮಾಧ್ಯಮಗಳ ವರದಿ ನಂತರ ನಾವು ತನಿಖೆ ನಡೆಸಿದೆವು. ಈ ಫೋಟೋ ಸುಳ್ಳು. ಅವರಿಬ್ಬರು ಭೇಟಿಯಾಗಿಯೇ ಇಲ್ಲ,' ಎಂದು ಹಾಲಿ ಜೈಲು ಸೂಪರಿಂಟೆಂಡೆಂಟ್ ಸೋಮಶೇಖರ್ ಸ್ಪಷ್ಟನೆ ನೀಡಿದ್ದಾರೆ.
Comments