ಐಸಿಸ್ ಜತೆ ಸಂಪರ್ಕ ಹೊಂದಿದ ಶಂಕೆಯ ಮೇಲೆ ಇಬ್ಬರ ಬಂಧನ

ಗುಜುರಾತನಲ್ಲಿ ಎಲೆಕ್ಷನ್ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಸ್ಫೋಟ ಮಾಡುವ ಬಗ್ಗೆ ದೊಡ್ಡ ಮಟ್ಟದ ಪ್ಲ್ಯಾನ್ ನಡೆದಿತ್ತು ಎಂದು ತಿಳಿದು ಬಂದಿದೆ.
ನವದೆಹಲಿ: ಗುಜುರಾತ ರಾಜ್ಯದ ವಿಧಾನಸಭಾ ಚುನಾವಣೆಗೂ ಮುನ್ನ ಅನುಮಾನಾಸ್ಪದ ವ್ಯಕ್ತಿಗಳಿಬ್ಬರನ್ನು ಬಂಧಿಸಲಾಗಿದೆ. ಬಂಧಿತ ವ್ಯಕ್ತಿಗಳಿಬ್ಬರು ಜಾಗತಿಕ ಉಗ್ರ ಸಂಘಟನೆಯಾದ ಐಸಿಸ್ ಜತೆಗೆ ಸಂಪರ್ಕ ಹೊಂದಿದ್ದಾರೆ ಎನ್ನುವ ಅನುಮಾನದ ಮೇಲೆ ಭಯೋತ್ಪಾದನೆ ವಿರೋಧಿ ಪಡೆ (ಎಟಿಎಸ್ ) ಇಬ್ಬರನ್ನು ಬಂಧಿಸಿದ್ದಾರೆ.
ಮೂಲಗಳ ಪ್ರಕಾರ, ಗುಜುರಾತನಲ್ಲಿ ಎಲೆಕ್ಷನ್ ನಡೆಯಲಿದೆ. ಈ ಹಿನ್ನಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಸ್ಫೋಟ ಮಾಡುವ ಬಗ್ಗೆ ದೊಡ್ಡ ಮಟ್ಟದ ಪ್ಲ್ಯಾನ್ ನಡೆದಿತ್ತು ಎಂದು ತಿಳಿದು ಬಂದಿದ್ದು, ಬಂಧಿತ ಆರೋಪಿಗಳಿಬ್ಬರು ಸೋಷಿಯಲ್ ಮೀಡಿಯಾ ನಲ್ಲಿ ಐಸಿಸ್ ಜತೆ ಸಂಪರ್ಕದಲ್ಲಿದ್ದರು. ಉಗ್ರವಾದಿ ಅಬ್ದುಲ್ ಅಲ್ ಫೈಜಲ್ ಎಂಬುವನಿಂದ ಇವರಿಬ್ಬರು ಪ್ರಭಾವಿತರಾಗಿದ್ದರು ಎಂದು ತಿಳಿದು ಬಂದಿದೆ. ಗುಜುರಾತ್ ನಲ್ಲಿ ಡಿಸೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. ಇವತ್ತು ಮುಖ್ಯ ಚುನಾವಣಾಧಿಕಾರಿ ಗುಜುರಾತ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.
Comments