ಬಸ್ ಹತ್ತಲು ಹೋಗಿ ಕಾಲು ಕಳೆದುಕೊಂಡ ವಿದ್ಯಾರ್ಥಿ

24 Oct 2017 8:30 PM | Crime
473 Report

ಮೈಸೂರು: ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ವಿದ್ಯಾರ್ಥಿಯೊಬ್ಬ ತನ್ನ ಕಾಲನ್ನು ಕಳೆದುಕೊಂಡಿರುವ ಘಟನೆ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ಮೈಸೂರು: ಚಲಿಸುತ್ತಿದ್ದ ಬಸ್ ಹತ್ತಲು ಹೋಗಿ ವಿದ್ಯಾರ್ಥಿಯೊಬ್ಬ ತನ್ನ ಕಾಲನ್ನು ಕಳೆದುಕೊಂಡಿರುವ ಘಟನೆ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಉಲ್ಲೇಖ್ ಪುಟ್ಟಸ್ವಾಮಿ ಎಂಬ ಬಾಲಕ ಕಾಲು ಕಳೆದುಕೊಂಡಿದ್ದಾರೆ. ನಗರದ ಸದ್ವಿದ್ಯಾ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಬನ್ನೂರಿನಿಂದ ಶಾಲೆಗೆ ಬರುತ್ತಿದ್ದ. ನಿನ್ನೆ ಸಂಜೆ ತರಗತಿ ಮುಗಿಸಿಕೊಂಡು ತಮ್ಮ ಊರು ಬನ್ನೂರಿಗೆ ಹೋಗಲು ಸಿಟಿ ಬಸ್ ನಿಲ್ದಾಣಕ್ಕೆ ಬಂದಿದ್ದ.

ಬಸ್ ಆಗಲೇ ಹೊರಟಿದ್ದು, ಆ ಬಸ್ ಹತ್ತಲು ಯತ್ನಿಸಿದ್ದು , ಆಯತಪ್ಪಿ ಕೆಳಗೆ ಬಿದಿದ್ದಾರೆ. ಇದರಿಂದ ಈತನ ಒಂದು ಕಾಲು ಅದೇ ಬಸ್ ಚಕ್ರಕ್ಕೆ ಸಿಲುಕಿದ್ದು ಕೂಡಲೇ ಬಸ್ ಡ್ರೈವರ್ ಬಸ್ ನಿಲ್ಲಿಸಿದ್ದಾರೆ. ಆದರೂ ಕಾಲ ಮೇಲೆ ಹರಿದ ಬಸ್ ಚಕ್ರದಿಂದ ವಿದ್ಯಾರ್ಥಿಯ ಕಾಲಿನ ಪಾದ ಸಂಪೂರ್ಣ ಮುರಿದು ಹೋಗಿದ್ದು, ತಕ್ಷಣ ಆತನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂಬಂಧ ಬಸ್ ಡ್ರೈವರ್ ಕಂಡಕ್ಟರ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Edited By

venki swamy

Reported By

Sudha Ujja

Comments