ಚಿನ್ನಕ್ಕಾಗಿ ಹೆಣವನ್ನೂ ಬಿಟ್ಟಿಲ್ಲ ಎಂತ ಕಾಲ ಬಂತಪ್ಪ ..!

5 ದಿನಗಳ ಹಿಂದೆ ಪ್ರೇಮಾ ಬಾಯಿ ಎನ್ನುವ ವೃದ್ಧೆ ಮೃತಪಟ್ಟಿದ್ದರು. ಅವರನ್ನು 50 ಗ್ರಾಂ ಚಿನ್ನಾಭರಣಗಳ ಸಮೇತ ಗ್ರಾಮಸ್ಥರು ಸಮಾಧಿ ಮಾಡಿದ್ದರು. ಆದರೆ ಸೋಮವಾರ ರಾತ್ರಿ ಸಮಾಧಿಯನ್ನು ಅಗೆದು ಶವದ ಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಶವವನ್ನು ಹಾಗೆಯೇ ಬಿಟ್ಟು ತೆರಳಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಅಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಕ್ಕಳಿಲ್ಲದ ಪ್ರೇಮಾ ಬಾಯಿಯ ಚಿನ್ನಾಭರಣಕ್ಕಾಗಿ ಅಂತ್ಯ ಸಂಸ್ಕಾರಕ್ಕೆ ಮುನ್ನ ಸಂಬಂಧಿಕರ ನಡುವೆ ಜಗಳ ನಡೆದಿದ್ದು, ಹೀಗಾಗಿ ಯಾರಿಗೂ ಬೇಡ, ಸಮಾಧಿಯಲ್ಲಿರಲಿ ಎಂದು ಚಿನ್ನಾಭರಣಗಳ ಸಮೇತ ಮಣ್ಣು ಮಾಡಲಾಗಿತ್ತು. ಈ ಬಗ್ಗೆ ತಿಳಿದವರೇ ಸಮಾಧಿ ಅಗೆದು ಚಿನ್ನಾಭರಣ ದೋಚಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
Comments