ಪಂಚ ಪತ್ನಿಯರಿಗೆ ಪತಿಯಾಗಲು ಹೊರಟ ಯೋಧ..!

ಮದುವೆ ಮಂಟಪಕ್ಕೆ ಬಂದ ಮೊದಲ ಪತ್ನಿ ಆತನ ಬಣ್ಣ ಬಯಲು ಮಾಡಿದ್ದಾರೆ. ಜಮ್ಮುವಿನಲ್ಲಿ ಸೇವೆಯಲ್ಲಿರುವ ಸಾಲಿಗ್ರಾಮ ಸಮೀಪದ ಲಕ್ಕಿಕೊಪ್ಪ ಗ್ರಾಮದ ಯೋಧ 2007 ರಲ್ಲಿ ಮೊದಲ ಮದುವೆಯಾಗಿದ್ದು 9 ವರ್ಷದ ಮಗಳಿದ್ದಾಳೆ.
ಒಂದಲ್ಲ, ಎರಡಲ್ಲ ನಾಲ್ವರನ್ನು ಮದುವೆಯಾಗಿದ್ದ ಸೈನಿಕನೊಬ್ಬ 5 ನೇ ಮದುವೆಯಾಗುವ ಸಂದರ್ಭದಲ್ಲಿ ಸಿಕ್ಕಿಬಿದ್ದ ಘಟನೆ ಮೈಸೂರಿನಲ್ಲಿ ನಡೆದಿದೆ. ಮದುವೆ ಮಂಟಪಕ್ಕೆ ಬಂದ ಮೊದಲ ಪತ್ನಿ ಆತನ ಬಣ್ಣ ಬಯಲು ಮಾಡಿದ್ದಾರೆ. ಜಮ್ಮುವಿನಲ್ಲಿ ಸೇವೆಯಲ್ಲಿರುವ ಸಾಲಿಗ್ರಾಮ ಸಮೀಪದ ಲಕ್ಕಿಕೊಪ್ಪ ಗ್ರಾಮದ ಯೋಧ 2007 ರಲ್ಲಿ ಮೊದಲ ಮದುವೆಯಾಗಿದ್ದು 9 ವರ್ಷದ ಮಗಳಿದ್ದಾಳೆ. ಮೊದಲ ಮದುವೆಯಾಗಿದ್ದನ್ನು ಮುಚ್ಚಿಟ್ಟಿದ್ದ ಈತ ಬಳಿಕ ತಾನು ಲೆಕ್ಚರರ್, ಪೊಲೀಸ್ ಇನ್ಸ್ ಪೆಕ್ಟರ್, ಲಾಯರ್ ಎಂದು ಹೇಳಿಕೊಂಡು 3 ಮದುವೆಯಾಗಿದ್ದಾನೆ. ನಾಲ್ವರನ್ನು ಮದುವೆಯಾಗಿದ್ದ ಭೂಪ ಇಂದು ಬೆಳಿಗ್ಗೆ ಮೈಸೂರಿನ ದೇವಾಲಯದಲ್ಲಿ ಮತ್ತೊಂದು ಮದುವೆಯಾಗುವಾಗ, ಮೊದಲ ಪತ್ನಿ ಆಗಮಿಸಿದ್ದಾರೆ. ತನ್ನ ಪತಿಯ ಬಣ್ಣವನ್ನು ಬಯಲು ಮಾಡಿದ್ದಾರೆ. ತನಗೆ ಡೈವೋರ್ಸ್ ಕೊಡದೇ ಮತ್ತೊಂದು ಮದುವೆಯಾಗಿದ್ದಾನೆ ಎಂದು ದೂರಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೈನಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Comments