ಪಟಾಕಿ ಅವಘಡ: ಬೆಂಗಳೂರಿನಲ್ಲಿ 11 ಮಂದಿ ಆಸ್ಪತ್ರೆಗೆ ದಾಖಲು

20 Oct 2017 12:51 AM | Crime
418 Report

ಬೆಂಗಳೂರು: ನಗರದ ವಿವಿಧೆಡೆ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ11 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬೆಂಗಳೂರು: ನಗರದ ವಿವಿಧೆಡೆ ದೀಪಾವಳಿ ಸಂಭ್ರಮದ ವೇಳೆ ಪಟಾಕಿ ಅವಘಡ ಸಂಭವಿಸಿದ್ದು, ಇಬ್ಬರು ಯುವಕರು ಸೇರಿದಂತೆ 11 ಮಂದಿ ಗಾಯಾಳುಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಾರಾಯಣ ನೇತ್ರಾಲಯದಲ್ಲಿ 8 ಮಂದಿ ದಾಖಲಾಗಿದ್ದು, 6 ಮಕ್ಕಳು ಮತ್ತು ಇಬ್ಬರು ಯುವಕರು ಆ ಪೈಕಿ ಸೇರಿದ್ದಾರೆ. ಮಿಂಟೋ ಆಸ್ಪತ್ರೆಗೆ 3 ಮಂದಿ ಮಕ್ಕಳು ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆಚ್ಚಿನದವರಿಗೆ ಕಣ್ಣಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

Edited By

venki swamy

Reported By

Sudha Ujja

Comments