ಕಾಗಿಣಾ ನದಿಯಲ್ಲಿ ಮುಳುಗಿ ಇಬ್ಬರ ಸಾವು

20 Oct 2017 12:40 AM | Crime
438 Report

ಕಲಬುರಗಿ: ಕಾಗಿಣಾ ನದಿಯಲ್ಲಿ ಮುಳುಗಿ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಕಲಬುರಗಿ: ಕಾಗಿಣಾ ನದಿಯಲ್ಲಿ ಮುಳುಗಿ ಬಾಲಕ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಜಿಲ್ಲೆಯ ಸೇಡಂ ತಾಲ್ಲೂಕು ಮೀನಹಾಬಾಳ್ ಗ್ರಾಮದ ಭರತ್ (12) ಹಾಗೂ ಮಲ್ಲಿಕಾರ್ಜುನ (35) ಸಾವನ್ನಪ್ಪಿದವರು. ಭರತ್ ಕಾಲು ಜಾರಿ ನದಿಯಲ್ಲಿ ಮುಳುಗಿದ್ದ. ಆತನನ್ನು ರಕ್ಷಿಸಲು ಹೋದ ಭರತನ ಸೋದರಮಾವ ಮಲ್ಲಿಕಾರ್ಜುನ ಈಜು ಬಾರದ ಹಿನ್ನಲೆಯಲ್ಲಿ ಮೃತಪಟ್ಟರು. ಮಳಖೇಡ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

 

Edited By

venki swamy

Reported By

Sudha Ujja

Comments