ಗೌರಿ ಲಂಕೇಶ್ ಹಂತಕರ ಸ್ಕೆಚ್ ತಂದ ಫಜೀತಿ!

ಗೌರಿ ಲಂಕೇಶ್ ಹಂತಕರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳಲ್ಲಿ ಓರ್ವನ ಹಣೆ ಮೇಲೆ ತಿಲಕ ಇರುವುದೇ ತೊಂದರೆ ಕಾರಣವಾಗಿದೆ. ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಪ್ರಭಾಕರ್ ಅವರು ಹಣೆ ಮೇಲೆ ತಿಲಕ ಇಟ್ಟುಕೊಳ್ಳುತ್ತಾರೆ. ಆ ನಿಟ್ಟಿನಲ್ಲಿ ರೇಖಾಚಿತ್ರಕ್ಕೂ ಪ್ರಭಾಕರ್ ಗೂ ಹೋಲಿಕೆ ಇದೆ ಎಂದು ಹೇಳಿ ಹಲವಾರು ಮಂದಿ ದೂರವಾಣಿ ಕರೆ ಮಾಡಿ ತೊಂದರೆ ಕೊಡುತ್ತಿರುವುದಾಗಿ ಅಲವತ್ತುಕೊಂಡಿದ್ದಾರೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ(ಎಸ್ ಐಟಿ) ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದ್ದರೆ, ಮತ್ತೊಂದೆಡೆ ಬಿಡುಗಡೆ ಮಾಡಿದ ಒಂದು ರೇಖಾಚಿತ್ರ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಫಜೀತಿಗೆ ಸಿಲುಕುವಂತೆ ಮಾಡಿದ್ದು, ಇದರಿಂದ ಸ್ಪಷ್ಟನೆ ಕೊಟ್ಟು ಸುಸ್ತಾದ ಘಟನೆ ನಡೆದಿದೆ! ಕೊನೆಗೂ ಬೇಸತ್ತ ಪ್ರಭಾಕರ್ ಅವರು ತಮ್ಮ ಫೇಸ್ ಬುಕ್ ನಲ್ಲಿ, ನನಗೂ ಗೌರಿ ಹತ್ಯೆಗೂ, ಹಂತಕರ ರೇಖಾಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಕಳೆದ 18 ವರ್ಷಗಳಿಂದ ಹಣೆಗೆ ತಿಲಕ ಇಟ್ಟುಕೊಳ್ಳುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
Comments