ಗೌರಿ ಹಂತಕರ ರೇಖಾಚಿತ್ರ ಬಿಡುಗಡೆ

14 Oct 2017 11:55 AM | Crime
360 Report

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಎಸ್ ಐಟಿ ಅಧಿಕಾರಿಗಳು. ಗೌರಿ ಹಂತಕರ ರೇಖಾಚಿತ್ರ ಬಿಡುಗಡೆಗೊಳಿಸಿದ್ದಾರೆ. ಬಿಕೆ ಸಿಂಗ್ ಹಾಗೂ ಡಿಸಿಪಿ ಅನುಚಿತ್ ಅವರ ನೇತೃತ್ವದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಕಲುಬುರ್ಗಿ ಮಾದರಿಯಲ್ಲಿಯೇ ಗೌರಿ ಹತ್ಯಾ ಶಂಕೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ಪೊಲೀಸ್ ತನಿಖಾ ದಳ ಶಂಕಿತ ಹಂತಕರ ರೇಖಾಚಿತ್ರ ಸಿದ್ದಪಡಿಸಿದೆ. ಗೌರಿ ಲಂಕೇಶ್ ಮನೆ ಬಳಿ ಎರಡು ಬೈಕ್ ನಲ್ಲಿ ಮೂವರು ದುಶ್ಕರ್ಮಿಗಳು ಆಗಮಿಸಿದ್ದಾರೆ, ಇಬ್ಬರು ಒಂದು ಬೈಕ್ ನಲ್ಲಿ, ಮತ್ತೊಬ್ಬ ಇನ್ನೊಂದು ಬೈಕ್ ನಲ್ಲಿದ್ದ, ಮೂವರು ಕೂಡ ಹೆಲ್ಮೆಟ್ ಧರಿಸಿದ್ದರಿಂದ ಅವರು ಗುರುತು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಎಸ್ ಐಟಿ ಆಧಿಕಾರಿಗಳು ಹೇಳಿದ್ದಾರೆ.ಆದರೆ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಶಂಕಿತ ಹಂತಕನ ರೇಖಾ ಚಿತ್ರ ಬಿಡಿಸಿದ್ದಾರೆ, ಮೂವರು ಕಲಾವಿದರ ಸಹಾಯ ಪಡೆದಿರುವ ಪೊಲೀಸರು ಶಂಕಿತ ಹಂತಕನ ಫೋಟೋ ಸಿದ್ದಪಡಿಸಿದ್ದು ಇಂದು ಬಿಡುಗಡೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

 

 

Edited By

Shruthi G

Reported By

Madhu shree

Comments