ಅಪಹರಣಕಾರರ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಅಕ್ಟೋಬರ್ 5 ರಂದು ಬೆಂಗಳೂರಿನ ಕೊತ್ತನೂರು ಬಳಿ ಅಭಿರಾಮ್ ಎಂಬ 3 ವರ್ಷದ ಮಗುವನ್ನು ಅಪಹರಣ ಮಾಡಿ, ಆ ಮಗುವನ್ನು ಶಹನಾಜ್ ಖಾನಮ್ ಎನ್ನುವವರಿಗೆ ನೀಡಲಾಗಿತ್ತು. ಅ.12 ರಂದು ಅಭಿರಾಮ್ ಮತ್ತು ಶಹಜಾನ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜೊತೆಗೆ ಮೂವರು ಅಪಹರಣಕಾರರನ್ನೂ ಬಂಧಿಸಲಾಗಿತ್ತು.
ಮೂರು ವರ್ಷದ ಮಗುವನ್ನು ಅಪಹರಿಸಿದ್ದ ಅಪಹರಣಕಾರರ ಮೇಲೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಇಂದು ಬೆಳಿಗ್ಗೆ 5:30 ರ ಸಮಯಕ್ಕೆ ಬೆಂಗಳೂರಿನಲ್ಲಿ ನಡೆದಿದೆ.ಇಂದು ಬೆಳಿಗ್ಗೆ ನೂರುಲ್ಲಾ ಎಂಬ ಆರೋಪಿಯನ್ನು ಚೇಸಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಪೊಲೀಸರ ಮೇಲೆ ದಾಳಿ ನಡೆಸುವುದಕ್ಕೆ ಆರಂಭಿಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಫೈರಿಂಗ್ ಮಾಡಿದ್ದು, ನೂರುಲ್ಲಾ ಕಾಲಿಗೆ ಗುಂಡು ತಗುಲಿದೆ. ಆರೋಪಿಗಳನ್ನು ನೂರುಲ್ಲಾ, ಐಜಾಕ್ ಖಾನ್, ವಾಹಿದ್ ಎಂದು ಗುರುತಿಸಲಾಗಿದೆ.
Comments