ಹಿಂದೂ ದೇವತೆಯ ಶ್ಲೋಕ ತಪ್ಪಾಗಿ ಹಾಡಿದ ಮುಸ್ಲಿಂ ಗಾಯಕನ ಬರ್ಬರ ಹತ್ಯೆ..!
ಸೆಪ್ಟೆಂಬರ್ 27ರಂದು ಮುಸ್ಲಿಂ ಜನಪದ ಗಾಯಕ 45ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್ ಎಂಬಾತ ತನ್ನ ಬೆಂಬಲಿಗರೊಂದಿಗೆ ಬಂದು ಸಂಗೀತ ಪರಿಕರಗಳನ್ನು ಧ್ವಂಸಗೈದು ಮಾರಣಾಂತಿಕವಾಗಿ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಆಡಿದ ಮುಸ್ಲಿಂ ಜನಪದ ಗಾಯಕರೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ಕೊಲೆ ಬಳಿಕ ಭಯಭೀತರಾಗಿರುವ 200ಕ್ಕೂ ಹೆಚ್ಚು ಮುಸ್ಲಿಂರು ಗ್ರಾಮ ತೊರೆದಿರುವ ಘಟನೆ ರಾಜಸ್ಥಾನದ ದಾಂತಲ್ ನಲ್ಲಿ ನಡೆದಿದೆ. ಪಾಕ್ ಗಡಿ ಭಾಗಕ್ಕೆ ಹೊಂದಿಕೊಂಡಂತಿರುವ ರಾಜಸ್ಥಾನದ ಜೈಪುರದ ದಾಂತಲ್ ಗ್ರಾಮದಲ್ಲಿ ಮುಸ್ಲಿಂರು ಪಲಾಯನಗೈದಿದ್ದು, ಶಾಲೆಗಳು ಮತ್ತು ಸರ್ಕಾರಿ ಕಚೇರಿಗಳ ಬಳಿ ಆಶ್ರಯ ಪಡೆದಿದ್ದಾರೆ. ಸೆಪ್ಟೆಂಬರ್ 27ರಂದು ಮುಸ್ಲಿಂ ಜನಪದ ಗಾಯಕ 45ರ ಹರೆಯದ ಅಹಮದ್ ಖಾನ್ ಎನ್ನುವವರು ಸಮಾರಂಭವೊಂದರಲ್ಲಿ ಹಾಡುತ್ತಿರುವ ವೇಳೆ ಹಿಂದೂ ದೇವತೆಯ ಶ್ಲೋಕಗಳನ್ನು ತಪ್ಪಾಗಿ ಪಠಿಸಿದ್ದಾರೆ. ಈ ವೇಳೆ ತಕರಾರು ತೆಗೆದ ಅರ್ಚಕ ರಮೇಶ್ ಸುತಾರ್ ಎಂಬಾತ ತನ್ನ ಬೆಂಬಲಿಗರೊಂದಿಗೆ ಬಂದು ಸಂಗೀತ ಪರಿಕರಗಳನ್ನು ಧ್ವಂಸಗೈದು ಮಾರಣಾಂತಿಕವಾಗಿ ಥಳಿಸಿ ಖಾನ್ ಅವರನ್ನು ಬರ್ಬರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಲಾಂಗ ಮಂಗನಿಯಾರ್ ಜನಾಂಗಕ್ಕೆ ಸೇರಿದ ಗಾಯಕ ಅಮಹದ್ ಖಾನ್ ಅವರು ಹಿಂದೂ ದೇವರ ಗೀತೆಗಳನ್ನು ದೇವಾಲಯಗಳಲ್ಲಿ ಹಾಡುತ್ತಿದ್ದರು. ತಲೆಮಾರುಗಳಿಂದ ಅವರ ಕುಟುಂಬ ಈ ಸಂಪ್ರದಾಯ ಆಚರಿಸಿಕೊಂಡು ಬಂದಿತ್ತು. ಇದೀಗ ಗಾಯಕನ ಕೊಲೆಯಿಂದಾಗಿ ಹೆದರಿರುವ ಗ್ರಾಮಸ್ಥರು ತಮ್ಮ ಮನೆಗಳಿಗೆ ಮರಳಲು ಹೆದರುತ್ತಿದ್ದಾರೆ. ಗ್ರಾಮಕ್ಕೆ ಸರ್ಕಾರ ಪ್ಯಾರ ಮಿಲಿಟರಿ ಪಡೆಗಳನ್ನು ಕಳುಹಿಸಿ ಭದ್ರತೆ ಕೈಗೊಂಡಿದೆ.
Comments