ಕರಾಚಿಯಲ್ಲಿ 'ಚಾಕು' ಎಂಬ ಭಯೋತ್ಪಾದನೆ, ಬೆಚ್ಚಿ ಬಿದ್ದ ಮಹಿಳೆಯರು!

ಈ ವರದಿ ಬೆಚ್ಚಿ ಬೀಳಿಸಿದ್ರೆ ಸತ್ಯ. ಕರಾಚಿಯಲ್ಲಿ ನಡೆದ ಈ ಘಟನೆ ಭಯೋತ್ಪಾದನೆಗಿಂತಲೂ ಮೋಸ್ಟ್ ಡೇಂಜರಸ್ ಎನಿಸಿದೆ.
ಇಸ್ಲಮಾಬಾದ್: ಕರಾಚಿಯಲ್ಲಿ ಓರ್ವನೊಬ್ಬ ಮಹಿಳೆಯರ ಮೇಲೆ ದಾಳಿ ನಡೆಸಿ ಅವರನ್ನು ಗಾಯಗೊಳಿಸುವುದೇ ಆತನ ಟಾರ್ಗೆಟ್. ಇದಾಗಲೇ ಸುಮಾರು ೧೦ ಮಹಿಳೆಯರ ಮೇಲೆ ದಾಳಿ ಮಾಡಿದ್ದಾನಂತೆ.
ಇನ್ನು ಈಗಾಗ್ಲೇ ಕೃತ್ಯವೆಸಗಿ ಪರಾರಿಯಾಗಿರುವ ಆರೋಪಿಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಪೊಲೀಸ ಮೂಲಗಳ ಪ್ರಕಾರ ಹೇಳುವ ಒಂಟಿ ಮಹಿಳೆಯರನ್ನು ಫಾಲೋ ಮಾಡುವ ಈತ ಅವರ ಮೇಲೆ ದಾಳಿ ನಡೆಸುತ್ತಾನೆ ಎಂದು ತಿಳಿದು ಬಂದಿದೆ. ಕರಾಚಿ ದೈನಿಕ ಪತ್ರಿಕೆಯ ಪ್ರಕಾರ, ಕೆಲಸ ಮಾಡುವ ಮಹಿಳೆಯರು ಸದಾ ಭಯದಲ್ಲೇ ಓಡಾಟ ನಡೆಸಬೇಕಾದ ಸ್ಥಿತಿ ಎದುರಾಗಿದೆ. ಬಸ್ ನಿಲ್ದಾಣಗಳನ್ನು ಬಿಟ್ಟು ಜನ ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಮೊರೆ ಹೋಗುತ್ತಿದ್ದಾರೆ. ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಒಂಟಿ ಆಗಿ ಓಡಾಡುತ್ತಿಲ್ಲ.
Comments