ಭಾರತ ಸರ್ಜಿಕಲ್ ದಾಳಿ ನಡೆಸಿದರೆ ಸುಮ್ಮನೇ ಇರಲ್ಲ: ಪಾಕ್ ಎಚ್ಚರಿಕೆ

ವಾಷಿಂಗ್ಟನ್ : ತನ್ನ ಅಣ್ವಸ್ತ್ರ ನೆಲೆಗಳ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದರೆ ಸುಮ್ಮನಿರಲಾರೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ.
ವಾಷಿಂಗ್ಟನ್ : ತನ್ನ ಅಣ್ವಸ್ತ್ರ ನೆಲೆಗಳ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದರೆ ಸುಮ್ಮನಿರಲಾರೆ ಎಂದು ಪಾಕಿಸ್ತಾನ ಎಚ್ಚರಿಕೆ ನೀಡಿದೆ. ಭಾರತೀಯ ವಾಯುಪಡೆ ಏರ್ ಚೀಫ್ ಮಾರ್ಷವ್ ಬಿ.ಎಫ್ ಧನೋವಾ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ , ಪಾಕಿಸ್ತಾನ ಸೌಹಾರ್ದತೆಯಿಂದ ಬದುಕಲು ಬಯುಸುತ್ತದೆ ಎಂದರು. ಆದರೆ ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ದಾಳಿ ನಡೆಸಿದರೆ ನಮ್ಮಿಂದ ಯಾರು ಸಂಯಮವನ್ನು ಪರಿಕ್ಷಿಸುವಂತಿಲ್ಲ ಎಂದು ಆಸಿಫ್ ಹೇಳಿದ್ದಾರೆ.
ಬಾಂಧವ್ಯ ವೃದ್ಧಿಗೆ ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನಗಳಿಗೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ, ಕಾಶ್ಮೀರದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಮಾತುಕತೆಗಳ ಪುನಾರಾಂಭಕ್ಕೆ ದೊಡ್ಡ ಅಡ್ಡಿ ಎಂದು ಆಸಿಫ್ ಆರೋಪಿಸಿದರು. ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಆಶ್ರಯ ನೀಡಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಟೀಕಿಸುತ್ತಿರುವ ಹಿನ್ನೆಲೆ ಮಾತುಕತೆಗಾಗಿ ಪಾಕ್ ವಿದೇಶಾಂಗ ಸಚಿವರು ಅಮೆರಿಕಾಕ್ಕೆ ಭೇಟಿ ನೀಡಿದ್ದಾರೆ. ಅಮೇರಿಕಾದ ವಿದೇಶಾಂಗ ಕಾರ್ಯದರ್ಶಿ ರೆಕ್ಸ್ ಟೆಲ್ಸರ್ ಸನ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಎಚ್.ಆರ್ ಮೆಕ್ ಮಾಸ್ಟರ್ ಜತೆಗಿನ ಮಾತುಕತೆ ಉತ್ತಮವಾಯಿತು ಎಂದು ಆಸಿಫ್ ತಿಳಿಸಿದರು.
Comments