ನಟ ದಿಲೀಪ್ ಗೆ ಕೇರಳ ಹೈಕೋರ್ಟ್ ನಿಂದ ಜಾಮೀನು

ಅಪಹರಣ ಪ್ರಕರಣದಲ್ಲಿ ಜುಲೈ 11ರಂದು ನಟ ದಿಲೀಪ್ ಬಂಧನವಾಗಿದ್ದರು. ನಂತರ ಅಂಗಮಲೈ ನ್ಯಾಯಾಲಯ ಸೇರಿದಂತೆ ಕೇರಳ ಹೈಕೋರ್ಟಿಗೆ ಸತತ ಜಾಮೀನಿಗಾಗಿ ಅರ್ಜಿ ಸಲ್ಲಿಸಿ ದಿಲೀಪ್ ವಿಫಲವಾಗಿದ್ದರು. ಇದೀಗ ಕೊನೆಗೂ ದಿಲೀಪ್ ಗೆ ಜಾಮೀನು ಮಂಜೂರು ಮಾಡಲಾಗಿದೆ.
ಬಹುಭಾಷಾ ನಟಿಯ ಮೇಲಿನ ಲೈಂಗಿಕ ಕಿರುಕುಳ ಹಾಗೂ ಅಪಹರಣ ಪ್ರಕರಣದಲ್ಲಿ ಮಲಯಾಳಂ ಚಿತ್ರನಟ ದಿಲೀಪ್ ಗೆ ಕೊನೆಗೂ ಜಾಮೀನು ಸಿಕ್ಕಿದೆ. ಪ್ರಕರಣದಲ್ಲಿ 11ನೇ ಆರೋಪಿಯಾಗಿರುವ ದಿಲೀಪ್ ಗೆ ಕೇರಳ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಫೆಬ್ರವರಿ 17ರಂದು ರಾತ್ರಿ ತ್ರಿಶೂರ್ ನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದಾಗ ಬಹುಭಾಷಾ ನಟಿಯನ್ನು ಆಕೆಯ ಕಾರಿನಲ್ಲೇ ಅಪಹರಣ ನಡೆಸಿ, ಕಾರಿನಲ್ಲೇ ಆಕೆಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು ಎನ್ನಲಾಗಿದೆ .
Comments