ಸೆಲ್ಫೀ ಅನಾಹುತ : ಮೂವರ ಬಲಿ
ರೈಲು ಬರುತ್ತಿದ್ದಾಗ ಸೆಲ್ಫೀ ತೆಗೆಯಲು ಹೋದ ವಿದ್ಯಾರ್ಥಿಗಳು ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಮೂರು ದೇಹಗಳು ರೈಲಿಗೆ ಸಿಲುಕಿ ಛಿದ್ರವಾಗಿದ್ದು, ಗುರುತು ಹಿಡಿಯುವುದು ಕಷ್ಟವಾಗಿದೆ.
ಸೆಲ್ಫೀ ತೆಗೆಯಲು ಹೋದ ಮೂವರು ವಿದ್ಯಾರ್ಥಿಗಳು ರೈಲಿಗೆ ಸಿಲುಕಿ ಮೃತಪಟ್ಟ ಘಟನೆ ಬಿಡದಿ ಬಳಿ ನಡೆದಿದೆ. ಮೃತಪಟ್ಟರು ಬೆಂಗಳೂರಿನ ಖಾಸಗಿ ಕಾಲೇಜು ವಿದ್ಯಾರ್ಥಿಗಳಾಗಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ರಾಮನಗರ ಜಿಲ್ಲೆಯ ಬಿಡದಿಯ ವಂಡರ್ ಲಾ ಗೇಟ್ ಸಮೀಪ ಈ ದುರ್ಘಟನೆ ನಡೆದಿದೆ. ಬಿಡದಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ವಿದ್ಯಾರ್ಥಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಮೂವರು ಬೆಂಗಳೂರಿನ ಖಾಸಗಿ ಕಾಲೇಜುಗಳ ವಿದ್ಯಾರ್ಥಿಗಳು ಎಂಬ ಮಾಹಿತಿ ಸಿಕ್ಕಿದೆ.
Comments