ದೇವರಾಜ್ ಎರಡನೇ ಪುತ್ರನಿಗೆ ಸಂಕಷ್ಟ

02 Oct 2017 9:19 PM | Crime
398 Report

ಬೆಂಗಳೂರು : ಉದ್ಯಮಿ ಪುತ್ರ ಗೀತಾ ವಿಷ್ಣು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಉದ್ಯಮಿ ಪುತ್ರ ಗೀತಾ ವಿಷ್ಣು ಜತೆ ಸ್ಯಾಂಡಲ್ ವುಡ್ ನಟರಾದ ಪ್ರೇಮ್, ದಿಗಂತ್ ಹಾಗೂ ಪ್ರಜ್ವಲ್ ದೇವರಾಜ್ ಇದ್ದರು ಎಂಬ ಮಾತುಗಳು ಕೇಳಿ ಬಂದಿತ್ತು.

ಆದರೆ ನಟರು ತಾವು ಗೋವಾದಲ್ಲಿರುವುದಾಗಿ ಹೇಳಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದೇವರಾಜ್ ಎರಡನೇ ಪುತ್ರ ಪ್ರಣಬ್ ದೇವರಾಜ್ ಗೆ ಪೊಲೀಸರು ನೊಟೀಸ್ ಜಾರಿಗೊಳಿಸಿದ್ದಾರೆ.

ಸೆ. 29ರಂದು ಜಯನಗರ ಸೌತ್ ಎಂಡ್ ಸರ್ಕಲ್ ಬಳಿ ಸಂಭವಿಸಿದ ಕಾರು ಅಪಘಾತ ಪ್ರಕರಣದ ವಿಚಾರಣೆಗೆ ಹಾಜರಾಗಲು ಖ್ಯಾತ ನಟ ದೇವರಾಜ್ ಎರಡನೇ ಮಗ ಪ್ರಣಮ್ ದೇವರಾಜ್ ಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಇದನ್ನು ಗಮನಿಸಿದರೆ ಅಪಘಾತ ನಡೆದಂದು ಉದ್ಯಮಿ ಪುತ್ರನೊಂದಿಗೆ ಪ್ರಣಬ್ ದೇವರಾಜ್ ಇದ್ದರಾ ಎಂಬ ಅನುಮಾನ ಮೂಡಿದೆ. ಅಲ್ಲದೇ ಗೀತಾವಿಷ್ಣು ಸಹೋದರ ಆದಿ ನಾರಾಯಣ, ಪ್ರಣಬ್ ದೇವರಾಜ್. ಫೈಸಲ್ , ಶಶಾಂಕ್ ಸೇರಿ ಒಟ್ಟು 6 ಮಂದಿಗೆ ನೊಟೀಸ್ ಜಾರಿಯಾಗಿದೆ.

Edited By

Shruthi G

Reported By

Sudha Ujja

Comments