ಚಿತ್ರನಟಿ ಸಿಂಧು ಮೆನನ್ ತಾಯಿಗೆ ಅಪಘಾತ

ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಆಟೋಗೆ ಕ್ಯಾಬ್ ಡಿಕ್ಕಿ ಹೊಡದ ಪರಿಣಾಮ ಚಿತ್ರನಟಿ ಸಿಂಧೂ ಮೆನನ್ ಅವರ ತಾಯಿಗೆ ತೀವ್ರ ಗಂಭೀರ ಗಾಯವಾಗಿದೆ.
ಬೆಂಗಳೂರು: ಸಿಗ್ನಲ್ ನಲ್ಲಿ ನಿಂತಿದ್ದ ಆಟೋಗೆ ಕ್ಯಾಬ್ ಡಿಕ್ಕಿ ಹೊಡದ ಪರಿಣಾಮ ಚಿತ್ರನಟಿ ಸಿಂಧೂ ಮೆನನ್ ಅವರ ತಾಯಿಗೆ ತೀವ್ರ ಗಂಭೀರ ಗಾಯವಾಗಿದೆ. ಯಶವಂತಪುರ ಸಿಗ್ನಲ್ ಬಳಿ ಮಧ್ಯಾಹ್ನ ಈ ಘಟನೆ ನಡೆದಿದ್ದು, ಸಿಂಧೂ ಮೆನನ್ ಅವರ ತಾಯಿ ಶ್ರಿದೇವಿ ಮತ್ತಿಕೆರೆಯಿಂದ ಮಲ್ಲೇಶ್ವರಂನ ನಿವಾಸಕ್ಕೆ ಆಟೋದಲ್ಲಿ ತೆರಳುತ್ತಿದ್ದಾಗ ಈ ದುರಂತ ನಡೆದಿದೆ ಎನ್ನಲಾಗಿದೆ.
ಯಶವಂತಪುರ ಸಿಗ್ನಲ್ ಬಳಿ ನಿಂತಿದ್ದ ಈ ಆಟೋಗೆ ಹಿಂದೆಯಿಂದ ಬಂದ ಕ್ಯಾಬ್ ಡಿಕ್ಕಿ ಹೊಡೆದಿದೆ. ಇದರಿಂದ ಆಟೋ ಒಳಗೆ ಕುಳಿತಿದ್ದ ಸಿಂಧು ತಾಯಿ ಎದೆಯ ಭಾಗಕ್ಕೆ ತೀವ್ರವಾದ ಗಾಯಗಳಾಗಿವೆ. ಈ ವೇಳೆ ಅವರಿಗೆ ಚಿಕಿತ್ಸೆ ಕೊಡಿಸುವ ಬದಲು ಆಟೋ ಹಾಗೂ ಕ್ಯಾಬ್ ಚಾಲಕರಿಬ್ಬರು ಜಗಳಕ್ಕಿಳಿದಿದ್ದಾರೆ. ಹೀಗಾಗಿ ಒಂದು ಗಂಟೆಗಳ ಕಾಲ ಚಿಕಿತ್ಸೆ ಸಿಗದೆ ಆಟೋದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಶ್ರಿದೇವಿಯವರು ಕಡೆಗೆ ಫೋನ್ ಮುಖಾಂತರ ಪುತ್ರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
Comments