ಮಲಯಾಳಿ ನಟಿ ಅಪಹರಣಕ್ಕೆ ಸುಪಾರಿ ಕೊಟ್ಟ ನಟ ದಿಲೀಪ್
ಮಲಯಾಳ ನಟಿ ಅಪಹರಣಕ್ಕೆ 3 ಕೋಟಿ ಸುಪಾರಿ ನೀಡಿದ್ದಾರೆ ಎಂದು ನಟ ದಿಲೀಪ್ ರವರನ್ನು ಸರ್ಕಾರಿ ವಕೀಲ ಕೇರಳ ಹೈಕೋರ್ಟ್‌ಗೆ ತಿಳಿಸಿದ್ದಾರೆ.ನಟಿಯನ್ನು ಅಪಹರಿಸಲು ಪಲ್ಸರ್ ಸುನಿ ಎಂಬಾತನಿಗೆ ಮುಂಗಡವಾಗಿ ದಿಲೀಪ್ 1.50 ಕೋಟಿ ನೀಡಿದ್ದು, ಬಾಕಿ ಹಣವನ್ನು ಕೆಲಸ ಆದ ಮೇಲೆ ನೀಡುವುದಾಗಿ ಹೇಳಿದ್ದರು’ ಎಂದು ವಕೀಲರು ವಿವರಿಸಿದರು.
ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದಿಲೀಪ್, ತಮಗೆ ಜಾಮೀನು ನೀಡುವಂತೆ ಕೋರಿ ಐದನೇ ಬಾರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ವಕೀಲರು ಈ ವಿಷಯ ತಿಳಿಸಿದರು. ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.ನಟಿಯನ್ನು ಅಪಹರಿಸಲು ಪಲ್ಸರ್ ಸುನಿ ಎಂಬಾತನಿಗೆ ಮುಂಗಡವಾಗಿ ದಿಲೀಪ್ 1.50 ಕೋಟಿ ನೀಡಿದ್ದು, ಬಾಕಿ ಹಣವನ್ನು ಕೆಲಸ ಆದ ಮೇಲೆ ನೀಡುವುದಾಗಿ ಹೇಳಿದ್ದರು’ ಎಂದು ವಕೀಲರು ವಿವರಿಸಿದರು.ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ನಟಿಯನ್ನು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪಲ್ಸರ್ ಸುನಿ ಹಾಗೂ ದಿಲೀಪ್ ಅವರನ್ನು ಕಳೆದ ಫೆ.23ರಂದು ಪೊಲೀಸರು ಬಂಧಿಸಿದ್ದಾರೆ. ವಾದ, ಪ್ರತಿವಾದ ಆಲಿಸಿದ ನ್ಯಾಯಮೂರ್ತಿಗಳು ಜಾಮೀನು ಕುರಿತಾದ ತೀರ್ಪನ್ನು ಕಾಯ್ದಿರಿಸಿದ್ದಾರೆ.
Comments