ಅಕ್ಕ ನಿಂದ ತಮ್ಮನಿಗೆ ಧರ್ಮದೇಟು, ಕಾರಣ ಏನು ಗೊತ್ತಾ ?

ದುಡಿದ ಹಣವನ್ನೆಲ್ಲಾ ಕುಡಿಯಲು ಬಳಸುತ್ತಿದ್ದ ಕಳಕಪ್ಪ, ಪತ್ನಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ. ಈತನ ವರ್ತನೆಯಿಂದ ಆಕ್ರೋಶಗೊಂಡ ಸಹೋದರಿ ಕಳಕಪ್ಪನಿಗೆ ಕೈ ಕಾಲು ಕಟ್ಟಿ ಬಾರಿಸಿದ್ದಾರೆ. ಪತ್ನಿಯನ್ನು ಕೂಡಲೇ ಕರೆದುಕೊಂಡು ಬರುವಂತೆ ತಾಕೀತು ಮಾಡಿದ್ದಾರೆ.
ಮಹಿಳೆಯೊಬ್ಬರು ತಮ್ಮನನ್ನೇ ಕೈ ಕಾಲು ಕಟ್ಟಿ ಹಾಕಿ ಥಳಿಸಿದ ಘಟನೆ ಕೊಪ್ಪಳದ ಭಾಗ್ಯನಗರದಲ್ಲಿ ನಡೆದಿದೆ. ಕೂಲಿಕಾರ್ಮಿಕನಾಗಿರುವ ಕಳಕಪ್ಪ ಅಕ್ಕನಿಂದಲೇ ಏಟು ತಿಂದವ. ದುಡಿದ ಹಣವನ್ನೆಲ್ಲಾ ಕುಡಿಯಲು ಬಳಸುತ್ತಿದ್ದ ಕಳಕಪ್ಪ, ನಿತ್ಯ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಈತನ ಕಾಟಕ್ಕೆ ಪತ್ನಿ ಬೇಸತ್ತಿದ್ದಾರೆ. ಎಂದಿನಂತೆ ಮದ್ಯ ಸೇವಿಸಿ ಮನೆಗೆ ಬಂದ ಕಳಕಪ್ಪ ಮತ್ತೆ ಪತ್ನಿಯೊಂದಿಗೆ ಜಗಳವಾಡಿದ್ದು, ಪತ್ನಿಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದಾನೆ. ಮಗಳನ್ನು ಸಹೋದರಿಯ ಮನೆಗೆ ತಂದು ಬಿಟ್ಟಿದ್ದಾನೆ.ಈತನ ವರ್ತನೆಯಿಂದ ಆಕ್ರೋಶಗೊಂಡ ಸಹೋದರಿ ಕಳಕಪ್ಪನಿಗೆ ಕೈ ಕಾಲು ಕಟ್ಟಿ ಬಾರಿಸಿದ್ದಾರೆ. ಪತ್ನಿಯನ್ನು ಕೂಡಲೇ ಕರೆದುಕೊಂಡು ಬರುವಂತೆ ತಾಕೀತು ಮಾಡಿದ್ದಾರೆ. ಸ್ಥಳೀಯರು ಕಳಕಪ್ಪನ ಪತ್ನಿಯನ್ನು ಕರೆತಂದು ಮನೆಗೆ ಬಿಟ್ಟಿದ್ದಾರೆ. ಪೊಲೀಸರೂ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ, ಕಳಕಪ್ಪನಿಗೆ ಬುದ್ಧಿಮಾತು ಹೇಳಿದ್ದಾರೆ.
Comments