ತನ್ನ ಪತ್ನಿಯ ಪ್ರಿಯಕರನನ್ನು ದೇವಾಲಯದಲ್ಲಿ ಕೊಲೆಗೈದು ಸುಟ್ಟ ಪುರೋಹಿತ !

ಪುರೋಹಿತನೊಬ್ಬ ತನ್ನ ಪತ್ನಿಯ ಪ್ರಿಯಕರನನ್ನು ದೇವಾಲಯದಲ್ಲಿ ಕೊಲೆಗೈದು ಸುಟ್ಟ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ . ಗಾಂಧಿನಗರ ಪ್ರದೇಶದ ದೇವಾಲಯವೊಂದರ ಪುರೋಹಿತ 35ರ ಹರೆಯದ ಲಖನ್ ಎಂಬಾತ ತನ್ನ ಪತ್ನಿಯ ಮಾಜಿ ಪ್ರಿಯಕರನನ್ನು ಕೊಲೆಗೈದು ಜೈಲುಪಾಲಾಗಿದ್ದಾನೆ.
ಪತಿಯ ಕೃತ್ಯಕ್ಕೆ ಪತ್ನಿಯೂ ಸಾಥ್ ನೀಡಿ ಜೈಲು ಸೇರಿದ್ದಾಳೆ. ಮಥುರಾ ಮೂಲದ 30ರ ಹರೆಯದ ಮಹಿಳೆಯನ್ನು ಲಖನ್ ವಿವಾಹವಾಗಿದ್ದ. ಆದರೆ ಪತ್ನಿ ಮಾಜಿ ಪ್ರಿಯಕರ ಶೇಖರ್ (35) ನೊಂದಿಗೆ ಸ್ನೇಹ ಮುಂದುವರಿಸಿದ್ದಳು. ಆತನ ಸ್ನೇಹ ತೊರೆಯುವಂತೆ ಹೇಳಿದಾಗ ಆತನನ್ನು ಕೊಂದು ಮುಗಿಸುವ ಪ್ಲ್ಯಾನ್ ಮಾಡಿದ್ದಾಳೆ. ಪತ್ನಿಯ ದುರಾಲೋಚನೆಗೆ ಪತಿಯು ಅಸ್ತು ಎಂದು ಹೇಳಿದ್ದಾನೆ . ಪತ್ನಿಯ ಪ್ರಿಯಕರ ಶೇಖರ್ ಎಂಬಾತನನ್ನು ದೆಹಲಿಗೆ ಕರೆಸಿಕೊಂಡು ನಿದ್ರೆ ಮಾತ್ರೆಗಳನ್ನು ತಿನ್ನಿಸಿ ದೇವಾಲಯದ ಸ್ಟೋರ್ ರೂಮ್ ನಲ್ಲಿ ಕೂಡಿ ಹಾಕಿ ಚೆನ್ನಾಗಿ ಥಳಿಸಿ ಕೊಲೆಗೈದಿದ್ದಾರೆ. ದಿನ ಕಳೆದ ಬಳಿಕ ಶವ ಕೊಳೆತು ವಾಸನೆ ಬರಲು ಆರಂಭವಾದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪೊಲೀಸರಿಗೆ ಕರೆ ಮಾಡಿ ಕಥೆ ಕಟ್ಟಿದ್ದಾರೆ. ಯಾರೋ ಒಳಗೆ ಸಿಲುಕಿ ಕೊಂಡಿದ್ದಾರೆ ಎಂದು ದೂರು ನೀಡಿದ್ದು, ಪೊಲೀಸರು ಅನುಮಾನದಿಂದ ತೀವ್ರ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
Comments