ಬೈಕ್ ನಿಧಾನವಾಗಿ ಚಲಿಸಿ ಎಂದು ಹೇಳಿದ್ದಕ್ಕೆ ಯುವಕನಿಗೆ ಚಾಕು ಇರಿತ..
ಶಾಹು ನಗರದ ನಿವಾಸಿ ವಿನೋದ ಗಾಯಕವಾಡ ಎಂಬ ಯುವಕ ಬೈಕ್‍ನಲ್ಲಿ ತೆರಳುತ್ತಿದ್ದ, ಆರು ಜನ ಯುವಕರಿಗೆ ನಿಧಾನವಾಗಿ ಚಲಿಸಲು ಹೇಳಿದ್ದಾನೆ. ಇಷ್ಟಕ್ಕೆ ಆರು ಜನರು ವಿನೋದನ ಮೇಲೆ ಎಗರಿ ಎಡ ಭುಜಕ್ಕೆ ಹಿಂದಿನಿಂದ ಚಾಕು ಇರಿದು ಪರಾರಿಯಾಗಿದ್ದಾರೆ.
ಬೈಕ್ ಮೆಲ್ಲಗೆ ಚಲಾಸಯಿಸಲು ಹೇಳಿದ್ದಕ್ಕೆ ಯುವಕನಿಗೆ ಚಾಕು ಇರಿದ ಘಟನೆ ವಿಜಯಪುರದಲ್ಲಿ ನಡೆದಿದೆ. ನಗರದ ಅಂಬಾ ಭವಾನಿ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಸದ್ಯ ವಿನೋದನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಆರೋಪಿಯನ್ನು ಗಾಂಧಿಚೌಕ್ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನುಳಿದ ಐವರು ಆರೋಪಿಗಳ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.
Comments